ಹೊಸ ವರ್ಷದ ಹಿನ್ನೆಲೆಯಲ್ಲಿ ಎಲ್ಲರೂ ಪರಸ್ಪರ ಶುಭ ಕೋರುತ್ತಿರುತ್ತಾರೆ. ಇದು ಹಲವರಿಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಸಾರ್ವಜನಿಕ ಸೇವೆಯಲ್ಲಿದ್ದವರಿಗಂತೂ ಇದರಿಂದ ತುಂಬಾನೆ ಕಿರಿಕಿರಿಯಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರ್ ಕಮಿಷನರ್ ಮನವಿ ಮಾಡಿದ್ದಾರೆ.
ಯಾರೂ ಹೊಸ ವರ್ಷಕ್ಕೆ ಶುಭಕೋರಲು ಕಚೇರಿಗೆ ಬರಬಾರದು ಎಂದು ಮನವಿ ಮಾಡಿದ್ದಾರೆ. ಹೊಸ ವರ್ಷವನ್ನು ಭಿನ್ನವಾಗಿ ಆಚರಿಸಿಕೊಂಡಿರುವ ಕಮಿಷನರ್ ದಯಾನಂದ್, ಅನಾಥಾಶ್ರಮದ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಅಲ್ಲದೇ, ಹೊಸ ವರ್ಷದಂದು ಸಿಬ್ಬಂದಿ, ಅಧಿಕಾರಿಗಳು ಶುಭಾಶಯ ಕೋರಲು ಕಚೇರಿಗೆ ಬಾರದಂತೆ ಸೂಚಿಸಿದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಇರುವ ಅನಾಥಾಶ್ರಮ, ವೃದ್ಧಾಶ್ರಮ, ವಿಕಲಾಂಗ ಶಾಲೆ ಅಥವಾ ಹಾಸ್ಟೆಲ್ ಗಳಿಗೆ ತೆರಳಿ ಬೊಕ್ಕೆ ಹಾಗೂ ಗಿಫ್ಟ್ ನೀಡಿ ಮಕ್ಕಳಿಗೆ ಊಟ, ಕೇಕ್, ಹಣ್ಣು ಅಥವಾ ಕೈಲಾದಷ್ಟು ಸಹಾಯ ಮಾಡುವಂತೆ ಸಲಹೆ ನೀಡಿದ್ದಾರೆ.