ಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಮತ್ತೊಮ್ಮೆ ವಿಜಯೇಂದ್ರ (BY Vijayendra) ವಿರುದ್ಧ ಹರಿಹಾಯ್ದಿದ್ದಾರೆ. ಈ ವೇಳೆ ಡಿಕೆಶಿ ವಿರುದ್ಧ ಕೂಡ ಆರೋಪ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಜೊತೆ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಅವರ ಸಿಡಿ ಮಾಡಿಸಿದ್ದಾರೆ. ನಾನು ಪಲಾಯನವಾದಿಯಲ್ಲ. ಯಾವುದೇ ಕಾರಣಕ್ಕೆ ಪಲಾಯನ ಮಾಡುವುದಿಲ್ಲ. ಅಪ್ಪಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ ಎಂದಿದ್ದಾರೆ.
ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೆ ಪ್ರವಾಸ ಮಾಡುತ್ತೇನೆ. ಹಿಂದೂಗಳ ರಕ್ಷಣೆಗೆ ಪ್ರವಾಸ ಮಾಡುತ್ತೇನೆ. ನಮ್ಮ ಸಂಸದರು ವಿಜಯೇಂದ್ರ ವಿರುದ್ಧ ಇದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣ ಮಾಡಿದ್ದೇ ವಿಜಯೇಂದ್ರ ಮತ್ತು ಡಿಕೆಶಿ (DK Shivakumar). ಹನಿಟ್ರ‍್ಯಾಪ್ ಹಗರಣದಲ್ಲೂ ಇದೇ ಟೀಮ್ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ನನ್ನ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಮಹಾಭಾರತ, ರಾಮಾಯಣ ಕಾಲದಿಂದಲೂ ಇಂತಹ ಅನ್ಯಾಯಗಳು ಒಳ್ಳೆಯವರಿಗೆ ಆಗುತ್ತಲೇ ಇವೆ. ಅನಂತಕುಮಾರ್ ಹೆಗಡೆ, ಈಶ್ವರಪ್ಪಗೂ ಇದೇ ಅನ್ಯಾಯ ಆಯಿತು. ಯಡಿಯೂರಪ್ಪ ಚೇಲಾನನ್ನು ನಿಲ್ಲಿಸಿ, ಸಿ.ಟಿ ರವಿ ಸೋಲಿಸಿದರು. ಈಗ ಹಿಂದೂ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.