ಮಂಗಳೂರು | ಮಂಗಳೂರಿನಲ್ಲಿ CCB ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಉಗಾಂಡಾ ಮಹಿಳೆಯೊಬ್ಬರನ್ನು ಬಂಧಿಸಿ, ಸುಮಾರು 4 ಕೋಟಿ ರೂ. ಮೌಲ್ಯದ ನಾಲ್ಕು ಕೆಜಿ MDMA ಡ್ರಗ್ಸ್ ವಶಪಡಿಸಿಕೊಂಡಿದೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ಜಿಗಣಿಯಲ್ಲಿ ವಾಸಿಸುತ್ತಿರುವ ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದೆ. ಈಕೆ ಮಂಗಳೂರು ನಗರದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪೆಡ್ಲರ್‌ಗಳ ಜಾಲಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಕಳೆದ ಡಿಸೆಂಬರ್‌ನಲ್ಲಿ ಮುಲ್ಕಿ ಮತ್ತು ಸುರತ್ಕಲ್ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಸ್ಥಳೀಯ ಡ್ರಗ್ಸ್ ವಿತರಕರನ್ನು ಬಂಧಿಸಿದ ನಂತರ ಪ್ರಕರಣದ ತನಿಖೆ ವೇಗ ಪಡೆದುಕೊಂಡಿತ್ತು. ಆ ಶಂಕಿತರಿಂದ 900 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ತನಿಖಾಧಿಕಾರಿಗಳು ಬೆಂಗಳೂರಿನ ಝಲ್ವಾಂಗೊ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆದುಕೊಂಡಿದ್ದರು.
ಸದ್ಯ ಈ ದಂಧೆಯಲ್ಲಿ ಭಾಗಿಯಾಗಿರುವ ಆರು ಮಂದಿ ವ್ಯಾಪಾರಿಗಳಾದ ಬೈಂದೂರಿನ ಮೊಹಮ್ಮದ್ ಶಿಯಾಬ್ (22), ಉಳ್ಳಾಲದ ಮೊಹಮ್ಮದ್ ನೌಶಾದ್ (29), ಮಂಗಳೂರಿನ ಇಮ್ರಾನ್ (27), ಬಂಟ್ವಾಳದ ನಿಸಾರ್ ಅಹ್ಮದ್ (36), ಕಾಪುವಿನ ಮೊಹಮ್ಮದ್ ಇಕ್ಬಾಲ್ (30) ಮತ್ತು ಪಡುಬಿದ್ರೆಯ ಶೆಹರಾಜ್ ಶಾರುಕ್ (25) ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ : ಆಧುನಿಕ ಕ್ರಿಕೆಟ್‌ನ ಬದಲಾದ ವೇಗಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ ರೂಪಾಂತರ!


















