ಬೆಂಗಳೂರು: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE Scholarship 2025)ಯು ದೇಶಾದ್ಯಂತ ಇರುವ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಘೋಷಿಸಿದೆ. ಯಾವುದೇ ಮನೆಯಲ್ಲಿ ಒಬ್ಬಳೇ ಪುತ್ರಿ ಇರುವ, ಪ್ರಥಮ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸುವ ಮೂಲಕ ಮಾಸಿಕ 1 ಸಾವಿರ ರೂಪಾಯಿ ವಿದ್ಯಾರ್ಥಿವೇತನ ಪಡೆಯಬಹುದು. ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು?
• ವಿದ್ಯಾರ್ಥಿನಿಯರು ಪ್ರಥಮ ಪಿಯುಸಿಯಲ್ಲಿ ಓದುತ್ತಿರಬೇಕು
• ಸಿಬಿಎಸ್ಐ ಕಾಲೇಜುಗಳಲ್ಲೇ ಓದುತ್ತಿರಬೇಕು
• ಸಿಬಿಎಸ್ಇ ಎಸ್ಸೆಸ್ಸೆಲ್ಸಿಯಲ್ಲಿ ಶೇ.75ರಷ್ಟು ಅಂಕ ಪಡೆದಿರಬೇಕು
• ವಿದ್ಯಾರ್ಥಿನಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು
ವಿದ್ಯಾರ್ಥಿನಿಯರು ಎರಡು ವರ್ಷಗಳವರೆಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಲಾಗುತ್ತದೆ. ಪ್ರಥಮ ಪಿಯುಸಿಯಲ್ಲಿ ಸ್ಕಾಲರ್ ಶಿಪ್ ಪಡೆದು, ಎರಡನೇ ವರ್ಷವೂ ಪಡೆಯಬೇಕು ಎಂದರೆ, ಪ್ರಥಮ ವರ್ಷದಲ್ಲಿ ಶೇ.70ರಷ್ಟು ಅಂಕಗಳನ್ನು ಪಡೆದಿರಬೇಕು ಎಂದು ನಿಯಮ ರೂಪಿಸಲಾಗಿದೆ.
ವಿದ್ಯಾರ್ಥಿನಿಯ ವ್ಯಕ್ತಿತ್ವ, ವರ್ತನೆ ಕುರಿತು ಕಾಲೇಜಿನ ಪ್ರಮಾಣಪತ್ರ ಬೇಕು. ಹಾಗೆಯೇ, ವಿದ್ಯಾರ್ಥಿವೇತನದ ಅರ್ಜಿಗೆ ಕಾಲೇಜು ಪ್ರಾಂಶುಪಾಲರ ಸಹಿ ಇರಬೇಕು. ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು cbse.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.