ಹಾಸನ: ಮಲೆನಾಡು ಭಾಗದಲ್ಲಿ ಹೆಚ್ಚಿದ ಮಳೆ ಹಿನ್ನಲೆ ಕಾವೇರಿ ಮತ್ತು ಅದರ ಉಪನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಹಾವೇರಿಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿದ ಪರಿಣಾಮ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.
ಕಾವೇರಿ ನದಿಗೆ ಅಡ್ಡಲಾಗಿ ಅರಕಲಗೂಡು ತಾಲ್ಲೂಕು ಕಟ್ಟೇಪುರದಲ್ಲಿ ಕಟ್ಟಿರುವ ಕಟ್ಟೆ ಬಳಿ ನೀರು ದುಮ್ಮುಕ್ಕಿ ಹರಿಯುತ್ತಿದ್ದು, ಮೈದುಂಬಿ ಹರಿಯುವ ಕಾವೇರಿ ನದಿಯನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಜನರು ನದಿಯ ವಿಹಂಗಮ ನೋಟವನ್ನು ಕಂಡು ಮನಸೋತಿದ್ದಾರೆ.