ಬೆಂಗಳೂರು : ರಾಜ್ಯ ಸರ್ಕಾರ ಆರ್ಥಿಕ ಹಾಗೂ ಶೈಕ್ಷಣಿಕ ಹೆಸರಿನಲ್ಲಿ ಜಾತಿ ಸಮೀಕ್ಷೆ ನಡೆಸಲಿದೆ ಎಂದು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ತಿಳಿಸಿದ್ದಾರೆ.
ಒಕ್ಕಲಿಗ ಜನಾಂಗದವರು ತಪ್ಪದೇ “ಒಕ್ಕಲಿಗ ಜಾತಿ” ಎಂದು ಬರೆಸಬೇಕು ಎಂದು ಮನವಿ ಮಾಡಿ, ಸಮೀಕ್ಷೆ ವೇಳೆ ಸೂಕ್ತ ಮಾಹಿತಿ ನೀಡುವ ಮೂಲಕ ಜಾತಿ ಗಣತಿ ಸಮರ್ಪಕವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಸೆ.22 ರಿಂದ ಅ.7 ರ ವರೆಗೂ ಸಮೀಕ್ಷೆ ನಡೆಸುವ ಸಾಧ್ಯತೆ ಇದ್ದು, ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಮಾಡಿದ್ದ ಸಮೀಕ್ಷೆಯನ್ನು ಒಪ್ಪದಂತೆ ಸರ್ಕಾರಕ್ಕೆ ವಿನಂತಿಸಿದ್ದಾರೆ.
ಹಿಂದಿನ ಸಮೀಕ್ಷೆ ಅಪೂರ್ಣ, ಅವೈಜ್ಞಾನಿಕವಾಗಿದ್ದು, ಹಲವು ನ್ಯೂನ್ಯತೆಯಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.



















