ರಾಜ್ಯದಲ್ಲಿ ಜಾತಿ ಗಣತಿ ಕಿಚ್ಚು ಹೆಚ್ಚಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಹೈಕಮಾಂಡ್ ಶ್ರೀರಕ್ಷೆ ಇದೆ ಎನ್ನಲಾಗಿದೆ.
ರಾಜ್ಯ ರಾಜಕೀಯದ ಇತಿಹಾಸದ ಪಕ್ಕಾ ಲೆಕ್ಕದೊಂದಿಗೆ ಕಾಂಗ್ರೆಸ್ ಅಹಿಂದ ಮತಗಳನ್ನ ಭದ್ರ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ ಜಾತಿಯ ಅಸ್ತ್ರ ಹಿಡಿದಿದೆ. ಜೆಡಿಎಸ್ ಬೆನ್ನಿಗೆ ಮೊದಲಿಂದಲೂ ಒಕ್ಕಲಿಗ ಸಮುದಾಯ ನಿಂತಿದೆ. ಬಿಜೆಪಿ ಜೊತೆಗೆ ಲಿಂಗಾಯತ ಸಮುದಾಯ ನಿಂತಿದೆ. ಕಾಂಗ್ರೆಸ್ ಪರವಾಗಿ ಅಹಿಂದ ನಿಂತ ಮೇಲೆ ಶಕ್ತಿ ಬಂದಿದೆ.
ಹೀಗಾಗಿ ಅಹಿಂದ ಬೆನ್ನು ಬಿದ್ದಿದ್ದ ಕಾಂಗ್ರೆಸ್ ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಿತ್ತು. ಬಂಗಾರಪ್ಪ ಸಮಯದಲ್ಲಿ ಕೂಡ ಅಹಿಂದ ವರ್ಕೌಟ್ ಆಗಿತ್ತು. ಇದು ಕರ್ನಾಟಕ ಮಾತ್ರವಲ್ಲ ದೇಶದಲ್ಲೂ ಅನುಕೂಲವಾಗಿತ್ತು. ದೇಶದಲ್ಲಿ ಅಹಿಂದ ವಿಶ್ವಾಸಗಳಿಸಿದರೆ, ಗದ್ದುಗೆ ಪಕ್ಕಾ ಎಂಬ ಲೆಕ್ಕಾಚಾರದಲ್ಲಿ ಈಗ ಕಾಂಗ್ರೆಸ್ ಅಹಿಂದ ಅಸ್ತ್ರ ಹೂಡಲು ಮುಂದಾಗಿದೆ.


















