ದಾವಣಗೆರೆ: ರಾಜ್ಯ ಸರ್ಕಾರದಿಂದ ಮರು ಜಾತಿ ಗಣತಿ ಮಾಡುತ್ತಿರುವ ಹಿನ್ನೆಲೆ, ಧರ್ಮದ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸಲು ಪಾಂಡೋಮಟ್ಟಿ ಗುರುಬಸವ ಶ್ರೀಗಳು ಕರೆ ನೀಡಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಶ್ರೀಗಳು ವೈಧಿಕ ಧರ್ಮದಲ್ಲಿ ಅನೇಕ ನ್ಯೂನ್ಯತೆಗಳಿವೆ. ಬಸವಣ್ಣ ವೈಧಿಕ ಧರ್ಮದಲ್ಲಿ ಜನಿಸಿದರು, ಆದರೆ ವೈಧಿಕ ಧರ್ಮದಲ್ಲಿನ ಕರ್ಮತನ ನೋಡಿ ಸಹಿಸಲಾಗದೆ ವೈದಿಕದಲ್ಲಿ ಸಮಾನತೆ ಇಲ್ಲ, ಹೆಣ್ಣು ಮತ್ತು ಗಂಡಿಗೆ ಭೇದ ಭಾವ ಇದೆ ಎಂದು ಹೊರ ಬಂದರು. ನಂತರ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕು 150 ವರ್ಷದ ಹೋರಾಟ ಇದೆ. ಅದಕ್ಕೆ ಬಸವ ಸಂಸ್ಕೃತಿ ಅಭಿಯಾನ ಶುರುವಾಗಿದೆ ಎಂದು ಹೇಳಿದರು.
ಇದೇ ವೇಳೆ ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ 65ಲಕ್ಷ ತೋರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಲಿಂಗಾಯತರ ಸಂಖ್ಯೆ ಕಡಿಮೆ ಆಗಿದ್ದಕ್ಕೆ ನಾವು ಸಿಎಂ ಬಳಿ ಕೇಳಿದ್ದೇವು. ರಾಜ್ಯದಲ್ಲಿ ಒಂದುವರೆ ಕೋಟಿಗೂ ಅಧಿಕ ಲಿಂಗಾಯತರ ಸಂಖ್ಯೆ ಒಂದೂವರೆ ಕೋಟಿಗೂ ಅಧಿಕ ಲಿಂಗಾಯತರ ಸಂಖ್ಯೆ ಇದೆ ಎಂದು ನನಗೂ ತಿಳಿದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ ನೀವು ಹಿಂದೂ ಸಾಧರ, ಹಿಂದೂ ಪಂಚಮಸಾಲಿ, ಹಿಂದೂ ನೊಣಬ ಎಂದಯ ಬರೆಸಿದ್ದೀರಿ. ಇದರಿಂದ ಲಿಂಗಾಯತರ ಸಂಖ್ಯೆ ಕಡಿಮೆ ಇದೆ. ನೀವು ಎಲ್ಲರೂ ಸೇರಿ ಲಿಂಗಾಯತ ಎಂದು ಬರೆಸಿದರೆ 1 ಕೋಟಿ ಅಲ್ಲ ಎರಡು ಕೋಟಿ ಆಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಾವು ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು ಎಂದು ಗುರುಬಸವ ಸ್ವಾಮೀಜಿ ಹೇಳಿದ್ದಾರೆ.