ಮಂಡ್ಯ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಅಲಿಯಾಸ್ ಚಿನ್ನಯ್ಯನ ಬಗ್ಗೆ ಆತನ ಹುಟ್ಟೂರು ಚಿಕ್ಕಬಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನಯ್ಯ ಮೈಗಳ್ಳನಾಗಿದ್ದ, ಅವನಿಂದ ಒಂದು ಅಡಿ ಗುಂಡಿ ತೆಗೆಯಲು ಸಾಧ್ಯವಿಲ್ಲ, ಆತ ಹೇಳುತ್ತಿರುವುದೆಲ್ಲವೂ ಸುಳ್ಳು, ಆತನನ್ನು ಸರಿಯಾಗಿ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರ ಬರಲಿದೆ. ಸೂಕ್ತ ತನಿಖೆ ನಡೆಸುವಂತೆ ಚಿಕ್ಕಬಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.