ಅಮೆರಿಕದ ಕೆಂಟುಕಿಯಲ್ಲಿ ಕಾರ್ಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿದೆ. ಟೇಕಾಫ್ ಆಗುತ್ತಿದ್ದಂತೆ, ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನವಾಗಿದ್ದು, ಬೆಂಕಿ ಉಂಡೆಯಂತೆ ಸ್ಪೋಟವಾಗಿದೆ.

ಈ ಕಾರ್ಗೋ ವಿಮಾನ ಪತನದಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ. ಕೆಂಟುಕಿ ರಾಜ್ಯದ ಲೂಸಿವಿಲ್ಲೆ ಮೊಹಮ್ಮದ್ ಅಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ವಿಮಾನ ಟೇಕಾಫ್ ಆಗಿತ್ತು. ಹೋನೋಲುಲುಗೆ ವಿಮಾನ ಹೊರಟಿತ್ತು ಎಂದು ತಿಳಿದುಬಂದಿದೆ.
ವಿಮಾನದ ಎಡಭಾಗದ ರೆಕ್ಕೆ, ವಿಮಾನದ ಹಿಂಭಾಗಕ್ಕೆ ಬೆಂಕಿ ಬಿದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕಳೆದ ರಾತ್ರಿ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ. ಸಾವನ್ನಪ್ಪಿದವರಲ್ಲಿ ನಾಲ್ಕು ಮಂದಿ ವಿಮಾನದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನಂಜನಗೂಡಿನ ಹುಸ್ಕೂರು ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ



















