ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಾಟೆ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಹೆಮ್ಮಾಡಿ ಹೇಮಾಪುರ ಮಠದ ಸಮಿಪ ಅದೆ ಮಾರ್ಗದಲ್ಲಿಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದು ಕೊಂಡ ಸ್ಕೂಟಿ ಪಲ್ಟಿಯಾಗಿ ಹೆದ್ದಾರಿ ಬದಿಯಲ್ಲಿ ನಿಂತು ಕೊಂಡಿದ್ದ ಲಾರಿ ಅಡಿಗೆ ಸಿಲುಕಿದ ಘಟನೆ ಭಾನುವಾರ ನಡೆದಿದೆ.
ಅಪಘಾತದಲ್ಲಿ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಸಹಿತ ಮಕ್ಕಳಿಬ್ಬರಿಗೆ ಗಾಯವಾಗಿದ್ದು ಪಾರಾಗಿದ್ದಾರೆ