ಬೆಂಗಳೂರು : ಕೆನಡಾ ಮೂಲದ ಮಹಿಳೆಗೆ ಮಸಾಜ್ ಮಾಡುವ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ.ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಸಾಜ್ ಥೆರಪಿ ವೇಳೆ ಥೆರಪಿಸ್ಟ್ ಲೈಂಗಿಕ ಕಿರುಕುಳ ನೀಡಿದ್ದು, ಅರೆನಗ್ನ ಸ್ಥಿತಿಯಲ್ಲಿ ಇದ್ದಾಗ ಬಾಗಿಲು ತೆರೆಯಲಾಗಿದೆ ಎಂದು ವಿದೇಶಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿದರೂ, ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೂಡ ಮಾಡಲಾಗಿದೆ. ಮಸಾಜ್ ಸೇವೆಗೆ ಪಾವತಿಸಿದ್ದ 10 ಸಾವಿರ ರೂಪಾಯಿಗಳಲ್ಲಿ 7 ಸಾವಿರ ರೂಪಾಯಿಗಳನ್ನು ಸಿಬ್ಬಂದಿ ವಾಪಸ್ ನೀಡಿದ್ದು, ಬಳಿಕ ವಿಷಯವನ್ನು ಮುಂದುವರಿಸಬೇಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿದೇಶಿ ಮಹಿಳೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಉದ್ಯಮಿ ಕಿಡ್ನಾಪ್ ಪ್ರಕರಣ | ಬಂಧನ ವೇಳೆ CCB ಪೊಲೀಸರಿಗೆ ಮಾಜಿ ರೌಡಿಶೀಟರ್ ಯಶ್ವಸಿನಿ ದರ್ಪ


















