ಬೆಂಗಳೂರು: ಕೆಲಸಕ್ಕೆ ಸೇರಿಕೊಂಡು 4-5 ತಿಂಗಳಾಗಿರುತ್ತದೆ. ಮನೆಯಲ್ಲಿ ಯಾವುದೋ ತುರ್ತು ಕಾರಣಕ್ಕಾಗಿ ಹಣ ಬೇಕಾಗುತ್ತದೆ. ಮಹಾ ನಗರಗಳಲ್ಲಿ 15 ಸಾವಿರ ರೂ. ಸಂಬಳ ಇದ್ದರೆ ಉಳಿಸಲು ಆಗೋದಿಲ್ಲ. ಬ್ಯಾಂಕುಗಳು ಇಷ್ಟು ಕಡಿಮೆ ಸಂಬಳಕ್ಕೆ ಸಾಲ ಕೊಡೋದಿಲ್ಲ ಎಂಬುದೇ ನಮ್ಮ ತಲೆಯಲ್ಲಿರುತ್ತದೆ. ಲಕ್ಷಾಂತರ ರೂಪಾಯಿ ಸಂಬಳ ಇದ್ದವರಿಗೆ ಮಾತ್ರ ಸಾಲ ಕೊಡುತ್ತವೆ ಎಂದುಕೊಂಡಿರುತ್ತವೆ ಎಂದೇ ಭಾವಿಸಿರುತ್ತೇವೆ. ಆದರೆ, ಕೆಲ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿ ಎಫ್ ಸಿ) 15 ಸಾವಿರ ರೂ. ಸಂಬಳ ಇದ್ದವರಿಗೂ ವೈಯಕ್ತಿಕ ಸಾಲ (Personal Loan) ಕೊಡುತ್ತವೆ.
ಸಾಲ ಸಿಗೋದು ಎಷ್ಟು?
15 ಸಾವಿರ ರೂ. ಸಂಬಳ ಇರುವವರಿಗೆ ಎಕ್ಸಿಸ್, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿ ಕೆಲವು ಬ್ಯಾಂಕುಗಳು ಸಾಲ ಕೊಡುತ್ತವೆ. ಬ್ಯಾಂಕುಗಳ ವೆಬ್ ಪೋರ್ಟಲ್ ಗೂ ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲವೆ, ಬ್ಯಾಂಕುಗಳಿಗೆ ತೆರಳಿಯೂ ಸಾಲ ಪಡೆಯಬಹುದು. 15 ಸಾವಿರ ರೂಪಾಯಿ ಸಂಬಳ ಇರುವವರಿಗೆ ಬ್ಯಾಂಕುಗಳು 50 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತವೆ.
ಬ್ಯಾಂಕುಗಳಿಗೆ ನಿಮ್ಮ ವಿವರಗಳನ್ನು ನೀಡಿ, KYC ಪ್ರಕ್ರಿಯೆ ಮುಗಿಸಿ, EMI ಅವಧಿಯನ್ನು ಆಯ್ಕೆ ಮಾಡಿದರೆ ಸಾಕು, ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ವಾರ್ಷಿಕ 10.5% ಬಡ್ಡಿ ದರದಿಂದ ಆರಂಭವಾಗುತ್ತದೆ. ಬ್ಯಾಂಕಿನಿಂದ ಬ್ಯಾಂಕಿಗೆ ಬಡ್ಡಿ ಹಾಗೂ ಸಾಲ ನೀಡುವ ಮೊತ್ತದಲ್ಲಿ ವ್ಯತ್ಯಾಸ ಇರುತ್ತದೆ.
ಸಾಲ ಪಡೆಯಲು ಏನೆಲ್ಲ ಮಾನದಂಡಗಳು?
- ಭಾರತದ ಪ್ರಜೆಯಾಗಿರಬೇಕು
- 21 ರಿಂದ 60 ವರ್ಷ ವಯಸ್ಸಿನವರಾಗಿರಬೇಕು
- ಪ್ರತಿ ತಿಂಗಳು ಸಂಬಳ ಇರಬೇಕು (ಸ್ಯಾಲರಿ ಸ್ಲಿಪ್ ಕೇಳಲಾಗುತ್ತದೆ)
- ಸಿಬಿಲ್ ಸ್ಕೋರ್ 700ಕ್ಕಿಂತ ಜಾಸ್ತಿ ಇರಬೇಕು
- ಕಳೆದ 3-6 ತಿಂಗಳ ಸ್ಯಾಲರಿ ಸ್ಲಿಪ್ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್
- ವಿಳಾಸದ ದಾಖಲೆ (ಆಧಾರ್, ಪಾಸ್ಪೋರ್ಟ್ ಇತ್ಯಾದಿ)