ಭಾರತದ ಮಾದಕದ್ರವ್ಯ ನಿಯಂತ್ರಣ ಮಂಡಳಿ ಉಡುಪಿಯಲ್ಲೇ ಕುಳಿತು ವಿದೇಶಿಗರ ಸಂಪರ್ಕ ಬೆಳೆಸಿ ಡ್ರಗ್ಸ್ ಸಾಗಿಸುತಿದ್ದ ದೇಶದ ಅತಿದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿದೆ.
ದೆಹಲಿಯಲ್ಲಿ ಸಿಕ್ಕ ಡ್ರಗ್ಸ್ -ಆಪರೇಷನ್ ಮ್ಯಾಡ್ ಮ್ಯಾಕ್ಸ್
ಮೇ 25 ದೆಹಲಿಯಲ್ಲಿ ಸುಮಾರು 3.7 ಕೆಜಿ ಡ್ರಗ್ಸ್ ವಶದೊಂದಿಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ನೆಡೆಸಿದಾಗ ಉಡುಪಿಯ ಕಡೆಗೆ ಪ್ರಕರಣ ತಿರುಗಿತು. ಭಾರತೀಯ ಮಾದಕದ್ರವ್ಯ ನಿಯಂತ್ರಣ ಮಂಡಳಿ ಆಪರೇಷನ್ ಮ್ಯಾಡ್ ಮ್ಯಾಕ್ಸ್ ಹೆಸರಿಲ್ಲಿ ಕಾರ್ಯಾಚರಣೆ ಆರಂಭಿಸಿ 10ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುತಿದ್ದ ಡ್ರಗ್ಸ್ ಸಿಂಡಿಕೇಟ್ ಪತ್ತೆ ಹಚ್ಚಿ ಭಾರತದ 8 ನಗರಗಳಲ್ಲಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ಡ್ರಗ್ಸ್ ಬಗ್ಗೆ ಅರಿವೇ ಇರಲಿಲ್ಲ
ಉಡುಪಿಯಲ್ಲಿ ಕಾಲ್ ಸೆಂಟರ್ ಮೂಲಕ ಡ್ರಗ್ಸ್ ಸಪ್ಲೈ ಜಾಲವನ್ನು ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಸುಮಾರು 10 ಸಿಬ್ಬಂದಿಗಳು ಕೆಲಸ ಮಾಡುತಿದ್ದರು. ಆದರೇ ಇವರಿಗೆ ಡ್ರಗ್ಸ್ ಜಾಲದ ಅರಿವೇ ಇರಲಿಲ್ಲ ಎಂಬುದು ತನಿಖೆಯ ವೇಳೆ ತಿಳಿದು ಬಂದಿರುತ್ತದೆ.
ಇದೀಗ 8 ಜನರನ್ನು ಬಂಧಿಸಿ ತನಿಖೆ ನೆಡೆಸಲಾಗುತ್ತಿದ್ದು, ಅದೆಷ್ಟು ವಿಚಾರಗಳು ಹೊರಬೀಳಲಿವೆ ಕಾದು ನೋಡಬೇಕಾಗಿದೆ.