ದಾವಣಗೆರೆ : ಹೊಸ ವರ್ಷ 2026ನ್ನು ಬರಮಾಡಿಕೊಳ್ಳಲು ಬೆಣ್ಣೆನಗರಿ ದಾವಣಗೆರೆ ಜನರು ಕಾತರರಾದ್ದಾರೆ. ನಗರದ ಬೇಕರಿಯೊಂದರಲ್ಲಿ ವಿಭಿನ್ನ ಕೇಕ್ ಮೇಳ ಆಯೋಜಿಸಲಾಗಿದ್ದು, ಇತರೆಡೆ ಮಾಲ್ ಹಾಗೂ ರೆಸ್ಟೊರೆಂಟ್ಗಳಲ್ಲೂ ಸಂಭ್ರಮಾಚರಣೆಗೆ ಭರದ ಸಿದ್ದತೆ ನಡೆದಿದೆ.

ನಗರದ ಪಿಬಿ ರಸ್ತೆಯಲ್ಲಿರುವ ಆಹಾರ್ 2000 ಬೇಕರಿಯಲ್ಲಿ ಪ್ರತಿ ವರ್ಷದಂತೆ ಈ ಸಲವೂ ಬೃಹತ್ ಕೇಕ್ ಮೇಳ ನಡೆಯುತ್ತಿದೆ. ಸಾವಿರಕ್ಕೂ ಹೆಚ್ಚು ಮಾಡೆಲ್ಗಳ ಕೇಕ್ ಪ್ರದರ್ಶನ ಹಾಗೂ ಮಾರಾಟ ಮೇಳ ಇದಾಗಿದೆ.

ಸತತ 25 ವರ್ಷದಿಂದ ಕೇಕ್ ಮೇಳ ಮಾಡುತ್ತಿರುವ ಆಹಾರ್ 2000 ಬೇಕರಿ ಮಾಲೀಕ ರಮೇಶ್, ಈ ಬಾರಿ ಕಾರು, ಕಲ್ಲಂಗಡಿ ಹಣ್ಣು, ಗಡಿಯಾರ, ಫುಟ್ಬಾಲ್, ಫುಟ್ಬಾಲ್ ಮೈದಾನ, ಕ್ರಿಕೆಟ್ ಮೈದಾನ, ಸ್ಪೈಡರ್ ಮ್ಯಾನ್, ಮಿಕ್ಕಿಮೌಸ್ ಹಾಗೂ ಲಯನ್ ಸೇರಿದಂತೆ ವಿವಿಧ ಮಾದರಿಯ ಒಂದೂವರೆ ಸಾವಿರ ಕೆ.ಜಿ ಕೇಕ್ಗಳನ್ನು ತಯಾರಿಸಿದ್ದಾರೆ. ಸದ್ಯ ಈ ಕೇಕ್‌ಗಳು ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ : ಯಾದಗಿರಿ | ಕೇಕ್ ಬದಲಿಗೆ ಹಣ್ಣು, ತರಕಾರಿ ಕಟ್ ಮಾಡಿ ವರ್ಷದ ಕೊನೆಯ ದಿನ ಆಚರಿಸಿದ ರೈತ



















