ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ಆಗೇ ಆಗುತ್ತೆ. ಈ ಬಾರಿ ನನಗೂ ಸಚಿವ ಸ್ಥಾನ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಾಕಷ್ಟು ಹೇಳಿಕೆಗಳು ಹೊರಬರುತ್ತಿವೆ ಅಂತೆಯೇ ಪ್ರದೀಪ್ ಈಶ್ವರ್ ಸುದ್ದಿಗಾರರೋಂದಿಗೆ ಮಾತನಾಡುತ್ತಾ ನಾನೂ ಸಚಿವ ಸ್ಥಾನದ ಆಕಾಂಕ್ಷಿ. ನಾನೂ ಕೂಡ ಈ ಬಾರಿ ಸಚಿವನಾಗುತ್ತೇನೆ. ನನಗೂ ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಇನ್ನು ನನ್ನ ಮೇಲೆ ತಾಯಿ ಚಾಮುಂಡಿ ದೇವಿ ಆಶಿರ್ವಾದವಿದೆ. ಸಚಿವನಾಗಿ ನಾನೂ ರಾಜಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.