ಬೆಂಗಳೂರು : ಬೆಂಗಳೂರು ಏರ್‌ಪೋರ್ಟ್‌ನ ಹೊಸ ಪಾರ್ಕಿಂಗ್ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದು, ಸಾದಹಳ್ಳಿ ಟೋಲ್ ಬಳಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಗಳಿದಿರುವ ಕ್ಯಾಬ್ ಚಾಲಕರು ರಸ್ತೆ ತಡೆದಿದ್ದು, ಈ ವೇಳೆ ಕಲ್ಲು ತೂರಾಟವೂ ನಡೆದಿದೆ ಎಂದು ತಿಳಿದುಬಂದಿದೆ.
ಹೊಸ ದಂಡ ನೀತಿ ವಿರೋಧಿಸಿ ಕನ್ನಡ ಪರ ಸಂಘಟನೆ ಮತ್ತು ಏರ್ಪೋರ್ಟ್ ಟ್ಯಾಕ್ಸಿ ಚಾಲಕರು ಸಾದಹಳ್ಳಿ ಬಳಿ ಟೋಲ್ ತಡೆದು ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಜೋರಾಗುತ್ತಿದ್ದಂತೆ ಟ್ಯಾಕ್ಸಿ ಚಾಲಕರ ಸಂಘದ ನಾರಾಯಣಸ್ವಾಮಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಪ್ರತಿಭಟನಾನಿರತ ಚಾಲಕರನ್ನು ಚದುರಿಸಲು ಯತ್ನಿಸಿದ್ದು, ಲಾಠಿ ಚಾರ್ಜ್ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಯಲ್ಲೋ ಬೋರ್ಡ್ ಗಳಿಗೆ ದಂಡ ಪ್ರಯೋಗಕ್ಕೆ ಮುಂದಾಗಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ನಿಲುಗಡೆ ಸ್ಥಳಗಳಲ್ಲಿ 8 ನಿಮಿಷದವರೆಗೆ ಕಾಯಬಹುದು. ಬಳಿಕ 8 ರಿಂದ 13 ನಿಮಿಷದವರೆಗೆ ವಾಹನ ನಿಲ್ಲಿಸಿದರೆ 150 ರೂ ದಂಡ ವಿಧಿಸುವುದು. 13 ರಿಂದ 18 ನಿಮಿಷದ ವರೆಗೆ ಕ್ಯಾಬ್ ನಿಲ್ಲಿಸಿದರೆ 300 ರೂ ದಂಡ ಹಾಕುವುದಾಗಿ ಹಾಗೂ ಇನ್ನೂ ನಿರ್ಲಕ್ಷ್ಯ ತೋರಿದವರ ವಾಹನ ಟೋಯಿಂಗ್ ಮಾಡುವುದಾಗಿ ನಿಯಮ ಜಾರಿಗೆ ತಂದಿದೆ.
ಇದನ್ನೂ ಓದಿ : ರಘುಗೆ ಸೀಕ್ರೆಟ್ ರೂಮ್ ಬಗ್ಗೆ ಗೊತ್ತಾಗೋಯ್ತಾ..! ಗಿಲ್ಲಿ ಬಳಿ ಹೇಳಿದ್ದೇನು?


















