
ಕೆಲ ಕ್ಯಾಬ್ ಡ್ರೈವರ್ಸ್ ವರ್ತನೆಗೆ ಇಡಿಯ ಡ್ರೈವರ್ ಸಮೂಹವನ್ನೇ ಅನುಮಾನದಲ್ಲಿ ನೋಡುವ ವಿಕೃತಿಗಳು, ಪ್ರಲಾಪಗಳು ನಡೆಯುತ್ತಿರುತ್ತವೆ. ಅಷ್ಟಾಗಿಯೂ ಈ ಕ್ಯಾಬ್, ಆಟೋ ಚಾಲಕರುಗಳ ಚಾಲಾಕಿತನ, ಚುರುಕುತನ, ಒಳ್ಳೇತನವೂ ಸಹ ಆಗಾಗ ಸದ್ದು ಮಾಡುತ್ತವೆ. ಅಂತೆಯೇ ಇಲ್ಲೊಬ್ಬ ಚಾಲಕ ಮಹಾಶಯ ತನ್ನ ಕ್ಯಾಬ್ ಗ್ರಾಹಕರಿಗಾಗಿ ಸೂಚನಾ ಫಲಕ ನೇತು ಹಾಕಿ ಸುದ್ದಿಯಾಗಿದ್ದಾನೆ.

ಆರು ಪಾಯಿಂಟ್ಸ್ ಇರುವ ಫಲಕವನ್ನು ತನ್ನ ಕ್ಯಾಬ್ ನಲ್ಲಿ ಗ್ರಾಹಕರಿಗೆ ಸೂಚನೆಯಂತೆ ನೇತು ಹಾಕಿಕೊಂಡಿದ್ದು, ಅದೊಂದು ಲೈನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತ ವಿಶೇಷವಾಗಿ ಹುಡುಗಿಯರಿಗೆ ಬರೆದುಕೊಂಡಂತಿರುವ ಆ ಸಾಲುಗಳು ನೆಟ್ಟಿಗರ ಗಮನ ಸೆಳೆದಿದೆ. “ಭಯ್ಯಾ ಎಂದು ಕರೆಯಬೇಡಿ” ಎಂದು ಹಿಂದಿಯಲ್ಲೇ ಇರುಲ ಸೂಚನಾ ಫಲಕದಲ್ಲಿ ಬರೆದುಕೊಂಡಿದ್ದಾನೆ. ಹೆಚ್ಚಾಗಿ ಡ್ರೈವರ್ ಗಳನ್ನು ಹೆಣ್ಣು ಮಕ್ಕಳು ಅಣ್ಣಾ ಎಂಥಲೇ ಕರೆಯುವ ರೂಢಿಯಾದಂತಿದ್ದು, ಅದನ್ನು ವಿರೋಧಿಸುವ ಲೆಕ್ಕಾಚಾರದಲ್ಲಿ ಈ ಫಲಕ ಹಾಕಿರ ಬಹುದೇ, ಅಥವಾ ಹಿಂದಿಯವರೇ ತುಂಬಿ ಹೋಗಿರುವ ಸಿಟಿಗೆ ಅಣಕಿಸಲು ಹಾಕಿರಬಹುದೇ, ಇಲ್ಲಾ, ಒಂಟಿಯಾಗಿದ್ದೇನೆ ಎಂಬ ಸೂಚನಾಫಲಕವೇ ಎಂಬರ್ಥದಲ್ಲಿನೆಟ್ಟಿಗರು ನೂರು ಪ್ರಶ್ನೆ ಉತ್ತರ ಹುಡುಕಿದ ಪರಿಣಾಮ ಆ ಚಾಲಕನ ಸೂಚನಾ ಫಲಕ ಸದ್ಯ ವೈರಲ್ ಪಟ್ಟಿ ಸೇರಿಕೊಂಡಿದೆ.