ಮಂಡ್ಯ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By Election) ಸಿಪಿ ಯೋಗೇಶ್ವರ್ (CP Yogeshwar) ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರಪತ್ನಿ ಶೀಲಾ ಯೋಗೇಶ್ವರ್ (Sheela Yogeshwar) ಅವರು ಆಂಜನೇಯನಿಗೆ ಹರಕೆ ತೀರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪ್ರಸಿದ್ಧ ಕ್ಷೇತ್ರ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸಿಪಿ ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಭೇಟಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಗೂ ಮುನ್ನ ಹೊಳೆ ಆಂಜನೇಯ ದೇಗುಲಕ್ಕೆ ಯೋಗೇಶ್ವರ್ ಕುಟುಂಬ ಭೇಟಿ ನೀಡಿ, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿತ್ತು. ಈ ವೇಳೆ ಪತಿ ಯೋಗೇಶ್ವರ್ ಗೆಲುವಿಗಾಗಿ ಶೀಲಾ ಯೋಗೇಶ್ವರ್ ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿ ಕಟ್ಟಿ ಹರಕೆ ಕಟ್ಟಿಕೊಂಡಿದ್ದರು. ಯೋಗೇಶ್ವರ್ ಗೆಲುವಿಗಾಗಿ ಹರಕೆ ಹೊತ್ತಿದ್ದರು. ಈಗ ಪತಿ ಗೆಲುವು ಸಾಧಿಸಿದ್ದು, ಹರಕೆ ತೀರಿಸಿದ್ದಾರೆ.