ಬೆಂಗಳೂರು | ಬೆಂಗಳೂರಿನ ಉದ್ಯಮಿ ಸಿಜೆ ರಾಯ್ ಸಾವು ಉದ್ಯಮ ಜಗತ್ತಿಗೆ ಆಘಾತ ತಂದಿದೆ. ಜನವರಿ 30 ರಂದು ಸಿಜೆ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಇಂದು ಸಿಜೆ ರಾಯ್ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯುತ್ತಿದೆ. ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಅಂತಿಮ ವಿಧಿ ವಿಧಾನ ಪ್ರಕ್ರಿಯೆ ಮುಗಿಸಿ ಬಳಿಕ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಸಿಜೆ ರಾಯ್ ಹಲವು ಬಾರಿ ತಾವು ಕಾರ್ ಲವರ್ ಎಂದು ಹೇಳಿಕೊಂಡಿದ್ದಾರೆ. ಐಷಾರಾಮಿ ಕಾರುಗಳನ್ನು ಖರೀದಿಸಿವುದು ಡ್ರೈವ್ ಮಾಡುವುದು ಅತೀ ಹೆಚ್ಚು ಇಷ್ಟಪಡುತ್ತಾರೆ. ಇದೀಗ ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ನೆಚ್ಚಿನ ಎಲ್ಲಾ ಕಾರುಗಳನ್ನು ಬಳಕೆ ಮಾಡಿದ್ದಾರೆ. ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆಂಜ್, ರೇಂಜ್ ರೋವರ್, ಬುಗಾಟಿ, ಆಡಿ ಸೇರಿದಂತೆ ಹಲವು ಐಷರಾಮಿ ಕಾರುಗಳಲ್ಲಿ ಸಿಜೆ ರಾಯ್ ಅಂತಿಮ ಯಾತ್ರೆ ನಡೆದಿದೆ.
ಸಿಜೆ ರಾಯ್ ಕಾರನ್ನು ಅತೀಯಾಗಿ ಪ್ರೀತಿಸುತ್ತಿದ್ದರು. ಹೀಗಾಗಿ ಕುಟುಂಬಸ್ಥರು ಸಿಜೆ ರಾಯ್ ಅಂತಿಮ ಯಾತ್ರೆಯಲ್ಲಿ ಕಾರುಗಳನ್ನು ಬಳಕೆ ಮಾಡುವ ನಿರ್ಧಾರ ಮಾಡಿದ್ದರು. ರಾಯ್ ಪ್ರತಿ ಕಾರುಗಳಲ್ಲಿ ಹಲವು ಕತೆಗಳಿತ್ತು. ಅಂತಿಮ ಯಾತ್ರೆಯಲ್ಲಿ ಕಾರು ಬಳಸುವಾಗ ಕುಟುಂಬಸ್ಥರು ಕಣ್ಮೀರಿಟ್ಟಿದ್ದಾರೆ.
ರಾಯ್ ಪಾರ್ಥಿವ ಶರೀರವನ್ನು ಮೊದಲಿಗೆ ಸೆಂಟ್ ಜೋಸೆಫ್ ಚರ್ಚ್‌ಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಅಂತಿಮ ವಿಧಿ ವಿಧಾನ ಪ್ರಕ್ರಿಯೆ ನಡೆಸಲಾಗಿದೆ. ಚರ್ಚ್ ನಲ್ಲಿ ಪ್ರಾರ್ಥನೆ ಬಳಿಕ ಪಾರ್ಥಿವ ಶರೀರವನ್ನು ನೇಟರ್ ಲಕ್ಸುರಿ ರೆಸಾರ್ಟ್‌ಗೆ ತಂದು ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಇದನ್ನೂ ಓದಿ : ಕಾರವಾರ | ಧಗಧಗನೇ ಹೊತ್ತಿ ಉರಿದ ಭೀಮನಗುಡ್ಡ ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ



















