ಬೈಂದೂರು : ಜ್ಞಾನವೃದ್ಧಿಯ ಮೂಲಕ ಸಮಾಜದ ಅಂಧಕಾರ ಶೋಷಣೆಯನ್ನು ನಿಲ್ಲಿಸಿದ ಸುಧಾರಣೆಯ ಹರಿಕಾರರಾಗಿದ್ದಾರೆ. ಅವರ ಆದರ್ಶ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.
ಅವರು, ಬೈಂದೂರು ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನಸಿಕತೆಯ ಬದಲಾವಣೆಯಾದಾಗ ಜಗತ್ತು ಬದಲಾಗುತ್ತದೆ. ನಾರಾಯಣ ಗುರುಗಳ ವಿಚಾರಧಾರೆ ಮನೆಮನ ತಲುಪುವ ಮೂಲಕ ಜನ್ಮ ದಿನಾಚರಣೆ ಸಂಪನ್ನವಾಗಬೇಕು ಎಂದು ಹೇಳಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗುವ ನಾರಾಯಣ ಗುರುಗಳ ಸಂದೇಶ ಇಂದಿಗೂ ಪ್ರಸ್ತುತ. ಮೌಡ್ಯಗಳನ್ನು ಅರಿತು ಜನಸಾಮಾನ್ಯರಿಗೆ ಭಕ್ತಿ ಮೂಲಕ ಬದಲಾವಣೆಯ ವಿಚಾರಧಾರೆ ನೀಡಿದ ಸಂತರು ನಮಗೂ ಆದರ್ಶ ಎಂದು ತಿಳಿಸಿದ್ದಾರೆ.
ಈ ಸಂದರ್ಭ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಿಎನ್ ಬಿಲ್ಲವ ಅವರನ್ನು ತಾಲೂಕು ಆಡಳಿತ ಪರವಾಗಿ ಸಮ್ಮಾನಿಸಲಾಯಿತು. , ಉಪನ್ಯಾಸಕ ಪಂಜು ಬಿಲ್ಲವ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಬಸವರಾಜ್, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ ಬಿಲ್ಲವ, ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ ಮದನ್ ಕುಮಾರ, ಶೇಖರ ಪೂಜಾರಿ ಉಪ್ಪುಂದ, ಶಿವರಾಜ್ ಪೂಜಾರಿ, ಸುರೇಶ ಬಟ್ವಾಡಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ ಕಾರ್, ದೊಟ್ಟಯ್ಯ ಪೂಜಾರಿ, ಮಹೇಂದ್ರ ಪೂಜಾರಿ, ವಾಸು ಬಿಲ್ಲವ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ ಬಿಲ್ಲವ ಸ್ವಾಗತಿಸಿ, ಮಂಜುನಾಥ ವಂದಿಸಿದರು.

