ಬೈಂದೂರು ಮಂಡಲದ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಬೈಂದೂರು ಮಂಡಲದ ವತಿಯಿಂದ ಬಲಿದಾನ ದಿವಸ ಕಾರ್ಯಕ್ರಮ ನಡೆಯಿತು.
ಬೈಂದೂರಿನಲ್ಲಿನ ಕಾರ್ಯಕರ್ತರ ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜಗುರು ಅವರ ಪರಾಕ್ರಮ, ತ್ಯಾಗ, ಹೋರಾಟ, ಆದರ್ಶಗಳನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಯುವ ಮೋರ್ಚಾ ಉಪಾಧ್ಯಕ್ಷ ಪ್ರದೀಪ್ ಉಪ್ಪುಂದ, ಜಗದೀಶ್ ಆಲಂದೂರು ಸೇರಿದಂತೆ ಕಾರ್ಯಕರ್ತರು ಇದ್ದರು.