ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಬೈಂದೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ್ ಶೇರುಗಾರ್ ವಿಧಿವಶರಾಗಿದ್ದಾರೆ. ಇಂದು (ಸೆ.27 ಶುಕ್ರವಾರ) ಮುಂಜಾನೆ ತೀವೃ ಥರದಲ್ಲಿ
ಆರೋಗ್ಯದಲ್ಲಿ ಏರುಪೇರುಗೊಂಡು, ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ಸ್ವ-ಗೃಹದಲ್ಲಿ ಸಾವನ್ನಪ್ಪಿರುತ್ತಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಮೂಲಕ, 2008 ರಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಗೆದ್ದು ಶಾಸಕರಾಗಿದ್ದ ಲಕ್ಷ್ಮೀನಾರಾಯಣ್ ಅವರು, ನೇರವಂತಿಕೆಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಶಾಸಕರಾಗಿ ಕ್ಷೇತ್ರದಲ್ಲಿ ತಮ್ಮ ಅವಧಿಯಲ್ಲಿನ ಒಂದಷ್ಟು ಗುರುತರ ಕಾರ್ಯದ ಮೂಲಕ ಹೆಸರು ಮಾಡಿದ್ದರು. 2013ರ ನಂತರದಲ್ಲಿ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದ ಇವರು, ಸದ್ಯ ವಯೋ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಿಗ್ಗೆ 10:30ರಿಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ 4:30ಕ್ಕೆ ಬನಶಂಕರಿಯ ಚಿತ್ತಾಗಾರದಲ್ಲಿ ಅಂತಿಮ ಕಾರ್ಯ ನಡೆಸಲಾಗುವುದು ಎಂದು ತಿಳಿಸಲಾಗಿದೆ