ಉಡುಪಿ/ಬೈಂದೂರು : ಸುಮಾರು 5,60,000 ರೂ. ಮೌಲ್ಯದ 200 ಚೀಲ ಅಡಿಕೆ ಕದ್ದಂತಹ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಠಾಣ ವ್ಯಾಪ್ತಿಯ ಶಿರೂರು ಹಡವಿನಗದ್ದೆಯಲ್ಲಿರುವ ಮಸೂದ್ ಪಟೇಲ್ ಅವರ ಗೋದಾಮಿನಿಂದ ಅಡಿಕೆ ಎಗರಿಸಿದ್ದ ಖದೀಮರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಸೂದ್ ಪಟೇಲ್ ಹಡಗಿನಗೆದ್ದೆಯಲ್ಲಿ ಸುಮಾರು 60ಎಕ್ರೆ ಸ್ಥಳದಲ್ಲಿ ಕೃಷಿ ಮಾಡಿಕೊಂಡಿದ್ದು, ತೋಟದಲ್ಲಿ ಬೆಳೆದ ಸುಮಾರು 200 ಚೀಲ ಅಡಕೆಯನ್ನು ಗೋದಾಮಿನಲ್ಲಿ ಇರಿಸಿದ್ದರು.ಮೇ 22 ರಂದು ಬೆಳಿಗ್ಗೆ ಗೋದಾಮಿನ ಬೀಗ ತೆಗೆದಾಗ ಅಡಿಕೆ ಕಳವಾಗಿರುವುದು ತಿಳಿದುಬಂದಿತ್ತು. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಪೊಲೀಸರು ಇದೀಗ ಆರೋಪಿಗಳಾದ ಭಟ್ಕಳದ ಖ್ವಾಜಾ ಮಹಮ್ಮದ್, ಮಹಮ್ಮದ್ ಸಾಧಿಕ್, ಕಡಬ ತಾಲ್ಲೂಕಿನ ಸಂತೋಷ್ ಹಾಗೂ ಮೂಲತಃ ಧಾರವಾಡ ಪ್ರಸ್ತುತ ಭಟ್ಕಳದಲ್ಲಿ ವಾಸವಾಗಿರುವ ನವಾಜ್ ಘಜ್ನಿಯನ್ನು ಬಂಧಿಸಲಾಗಿದೆ.