ಕೊಪ್ಪಳ: ವಿಜಯನಗರ ಸಾಮ್ರಾಜ್ಯ ಅಂದ್ರೆ ಅದು ಕನ್ನಡಿಗರ ಹೆಮ್ಮೆ. ಇಂತಹ ಹೆಮ್ಮೆಯ ವಿಜಯನಗರ ಅರಸರ ಶ್ರೀಕೃಷ್ಣದೇವರಾಯ ಸಮಾಧಿ, ಇಂದು ಮಾಂಸದ ಅಂಗಡಿಯ ಅಡ್ಡೆಯಾಗಿದ್ದು, ದುರಂತವೇ ಸರಿ.
ಶ್ರಿಕಷ್ಣ ದೇವರಾಯ ಸಮಾಧಿಯಲ್ಲಿ ಮಾಂಸ ಶುದ್ದಿಕರಣ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸಮಾಧಿಯ ಕಂಬಕ್ಕೆ ಮೇಕೆ ನೇತು ಹಾಕಿ ಮಾಂಸ ಶುದ್ಧೀಕರಣ ಮಾಡಲಾಗಿದೆ. 64 ಕಂಬದ ಮಂಟಪದಲ್ಲಿ ಈ ಕೃತ್ಯ ಎಸಗಲಾಗಿದೆ.
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ಶ್ರೀಕೃಷ್ಣದೆವರಾಯ 64 ವಿದ್ಯೆಗಳನ್ನು ಅಧ್ಯಯನ ಮಾಡಿದ್ದ ಹಿನ್ನೆಲೆಯಲ್ಲಿ 64 ಕಂಬಗಳ ಸಮಾಧಿ ನಿರ್ಮಿಸಲಾಗಿತ್ತು. ಈ ಕಂಬಕ್ಕೆ ಮೇಕೆ ಕಟ್ಟಿ ದುಷ್ಕರ್ಮಿಗಳು ಮಾಂಸ ಸ್ವಚ್ಛ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


















