ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕುರ್ಚಿ ಕಾಳಗದಲ್ಲಿ ಬ್ಯುಸಿಯಾಗಿದ್ದಾರೆ. ವಿದ್ಯಾರ್ಥಿಗಳ ಅಹವಾಲು ಕೇಳ್ತಿಲ್ಲ. ಇಂದಿಗೂ ಲಕ್ಷಾಂತರ ಹುದ್ದೆಗಳು ಖಾಲಿ ಇದೆ. ರಿಸರ್ವೇಷನ್ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಾಡದೆ ಸರ್ಕಾರ ಕೈ ಕಟ್ಟಿ ಕುಳಿತಿದೆ ಎಂದು ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ ಧಾರವಾಡದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ಸಿಎಂ, ಸಚಿವರು ನಾಡಿನುದ್ದಕ್ಕೂ ಭಾಷಣ ಮಾಡಿದ್ದಾರೆ. ನಾಡಿನ ಜನತೆಗೆ ನ್ಯಾಯ ಕೊಡಲು ಆಗಿಲ್ಲ. ಸಿಎಂ ಸಿದ್ದರಾಮಯ್ಯ ಯುವ ಜನತೆ ವಿರುದ್ಧ ಚಲ್ಲಾಟ ಆಡ್ತಿದೆ. ದುರ್ದೈವ ಬೆಳಗಾವಿ ಅಧಿವೇಶನ ಸಂಧರ್ಭದಲ್ಲಿ ಕೂಡ ಇದೇ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ಸಿಎಂ ಜೊತೆ ಚರ್ಚೆಗೆ ಉಚ್ಚನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಯ್ತು.
ವಿದ್ಯಾರ್ಥಿಗಳ ಒಕ್ಕೂಟ ಬೆಳಗಾವಿ, ಕಲ್ಬುರ್ಗಿ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ಮಾಡಿದ್ರು. ಈಗ ಮತ್ತೊಮ್ಮೆ ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೆ ಪ್ರತಿಭಟನೆ ಮಾಡ್ತಿದ್ದಾರೆ. ವಿದ್ಯಾರ್ಥಿಗಳ ಪರ ಬಿಜೆಪಿ ಇದೆ. ಸಿದ್ದರಾಮಯ್ಯ ಅವರೇ ನಿಮ್ಮ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರ ಗಮನಿಸ್ತಿದೆ. ಸಿಎಂ ಹೇಳ್ತಿದ್ದಾರೆ ಪ್ರಕ್ರಿಯೆ ಆರಂಭವಾಗಿದೆ ಅಂತ. ಯುವಕರ ತಾಳ್ಮೆ ಇನ್ನೆಷ್ಟು ಪರೀಕ್ಷಿಸಲು ಹೊರಟಿದ್ದೀರಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು. ಕೂಡಲೇ ರಾಜ್ಯದಲ್ಲಿರೋ ಎರಡುವರೆ ಲಕ್ಷ ಹುದ್ದೆ ಭರ್ತಿ ಮಾಡಬೇಕು. ಯುವ ಜನತೆಗೆ ಕೂಡಲೇ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಅಭಿಷೇಕ್ ಶರ್ಮಾ ಕಳಪೆ ಆಟ ಟೀಕಿಸಿ ಕೊಹ್ಲಿ ಉದಾಹರಣೆ ನೀಡಿದ ಕೈಫ್



















