ಚಿಕ್ಕಬಳ್ಳಾಪುರ: ಉದ್ಯಮಿ ಸಕಲೇಶ್ ರೈತನ ಮೇಲೆ ಶೂಟೌಟ್ ನಡೆಸಿದ ಪ್ರಕರಣ ಸಂಬಂಧ ಇಂದು ರೈತ ಸಂಘಟನೆಗಳಿಂದ ಮಂಚೇನಹಳ್ಳಿ ಬಂದ್ ಮಾಡಲಾಗಿದೆ.
ಉದ್ಯಮಿ ಸಕಲೇಶ್ ಕುಮಾರ್ ಗೂಂಡಾಗಿರಿ ಖಂಡಿಸಿ ಸ್ವಯಂ ಪ್ರೇರಣೆಯಿಂದ ಮಂಚೇನಹಳ್ಳಿ ಜನ ಬಂದ್ ಮಾಡಿದ್ದರು. ಏಪ್ರಿಲ್ 23 ರಂದು ರೈತ ರವಿಕುಮಾರ್ ಮೇಲೆ ಉದ್ಯಮಿ ಸಕಲೇಶ್ ಕುಮಾರ್ ಶೂಟ್ ಮಾಡಿದ್ದರು. ಹೀಗಾಗಿ ಕಲ್ಲು ಗಣಿಗಾರಿಕೆಗೆ ವಲಸೇನಹಳ್ಳಿ ಸರ್ವೆ ನಂ 34 ರಲ್ಲಿ ನೀಡಿರುವ ಅನುಮತಿ ರದ್ದು ಮಾಡಬೇಕು.
ಮಂಚೇನಹಳ್ಳಿ ಸರ್ವೆ ನಂ 188 ರಲ್ಲಿ ನೀಡಿರುವ ಕ್ರಷರ್ ಅನುಮತಿಯನ್ನೂ ರದ್ದುಗೊಳಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯ ಮಾಡಿದವು. ಇಂದು ಕರೆ ನೀಡಿದ ಬಂದ್ ನಿಂದ ಅಂಗಡಿ ಮುಂಗಟ್ಟು, ಹೋಟೆಲ್, ಶಾಲಾಕಾಲೇಜು ಸೇರಿ ಹೆದ್ದಾರಿ ಸಂಚಾರ ಹೊರತುಪಡಿಸಿ ಉಳಿದ ಎಲ್ಲ ಸಂಚಾರ ಬಂದ್ ಮಾಡಲಾಗಿತ್ತು.


















