ಬೆಂಗಳೂರು : ಮಾಜಿ ರೌಡಿಶೀಟರ್ ಯಶಸ್ವಿನಿ ಕೋಕಾ ಕಾಯ್ದೆ ಅಡಿ ಬಂಧನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧನ ವೇಳೆ ಸಿಸಿಬಿ ಪೊಲೀಸರಿಗೆ ಅವಾಚ್ಯ ಧಾಟಿಯಲ್ಲಿ ಅವಾಜ್ ಹಾಕಿರುವುದು ಬೆಳಕಿಗೆ ಬಂದಿದೆ.ಸಿಸಿಬಿ ಪೊಲೀಸರು ಯಶಸ್ವಿನಿಯನ್ನು ವಶಕ್ಕೆ ಪಡೆಯುವ ವೇಳೆ, ಪೊಲೀಸರಿಗೆ ಅವಾಜ್ ಹಾಕಿದ್ದಾಳೆ ಎನ್ನಲಾಗಿದೆ.
ಬಂಧನ ಸಂದರ್ಭದಲ್ಲಿ ಮಾಧ್ಯಮದ ಹೆಸರನ್ನು ದುರುಪಯೋಗ ಮಾಡಿಕೊಂಡು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ರೌಡಿಶೀಟರ್ ಬೇಕರಿ ರಘು ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲೂ ಯಶಸ್ವಿನಿ ಹೆಸರು ಕೇಳಿಬಂದಿದ್ದು, ಯಶಸ್ವಿನಿ ವಿರುದ್ಧ ಒಟ್ಟು ಎಂಟು ಪ್ರಕರಣಗಳಿರುವುದಾಗಿ ತಿಳಿದುಬಂದಿದೆ.
ಸದ್ಯ ಕೋಕಾ ಆಕ್ಟ್ ಅಡಿ ಸಿಸಿಬಿಯಿಂದ ಯಶಸ್ವಿನಿಯನ್ನು ಬಂಧಿಸಿ ಜೈಲಿಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬರ್ತಡೇ ದಿನವೇ ಸಹಚರರ ಜೊತೆ ಥಾರ್, ಬೈಕ್‌ನಲ್ಲಿ ವ್ಹೀಲಿಂಗ್ | ರೌಡಿಶೀಟರ್ ಸೇರಿ 7 ಮಂದಿ ಅರೆಸ್ಟ್!



















