ಮಂಡ್ಯ : ಮಂಡ್ಯದಲ್ಲಿ ಮನೆಗಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.
ರಾತ್ರಿ ವೇಳೆ ಒಂಟಿ ಮನೆಯನ್ನೇ ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ. ಮಂಡ್ಯದ ಬೂದನೂರು ಗ್ರಾಮದಲ್ಲಿ ಮನೆಗಳ್ಳತನಕ್ಕೆ ತಡರಾತ್ರಿ ಖದೀಮರು ಯತ್ನಿಸಿದ್ದಾರೆ. ಒಂಟಿಯಾಗಿ ಬಂದ ಯುವಕನೋರ್ವ ಮನೆಗೆಳ್ಳತನಕ್ಕೆ ತಡರಾತ್ರಿ ಯತ್ನಿಸಿದ್ದಾನೆ.
ಆದರೆ, ನೆರೆ ಮನೆಯವರು ಯುವಕನ ಮನೆಗಳ್ಳತನ ಯತ್ನ ವಿಫಲಗೊಳಿಸಿದ್ದಾರೆ. ಪಕ್ಕದ ಮನೆಯಲ್ಲಿನ ಶಬ್ದ ಕೇಳಿ ಅಕ್ಕಪಕ್ಕದವರು ಎಚ್ಚರಗೊಂಡಿದ್ದಾರೆ. ಕೂಡಲೇ ಹೊರಗೆ ಬರುತ್ತಿದ್ದಂತೆ ಖದೀಮ ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.