ಬೆಂಗಳೂರು: ಆ್ಯಪಲ್ ಕಂಪನಿಯು ದೀಪಾವಳಿಯ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಡಿಸ್ಕೌಂಟ್ ಸೇಲ್ ಮಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಅಕ್ಟೋಬರ್ 3 ರಿಂದ ಆ್ಯಪಲ್ ತನ್ನ ಅಧಿಕೃತ ಸ್ಟೋರ್ ಗಳಲ್ಲಿ ಡಿಸ್ಕೌಂಟ್ ಆಫರ್ ಆರಂಭಿಸುತ್ತಿದೆ. ಆ್ಯಪಲ್ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಡಿಸ್ಕೌಂಟ್ ಘೋಷಿಸಿ ಈ ದಿನಾಂಕದಿಂದ ಸೇಲ್ ಮಾಡಲು ಕಂಪನಿ ಮುಂದಾಗಿದೆ. ಈಗಾಗಲೇ ಐಫೋನ್ 16 ಬಿಡುಗಡೆಯಾಗಿರುವ ಬೆನ್ನಲ್ಲೇ ದೀಪಾವಳಿ ಹಬ್ಬದ ಡಿಸ್ಕೌಂಟ್ ಸೇಲ್ ಭಾರತೀಯ ಗ್ರಾಹಕರಿಗೆ ಸಂತಸ ಮೂಡಿಸಿದೆ.
ಆದರೆ, ಕಂಪನಿಯು ಯಾವ ಉತ್ಪನ್ನಗಳಿಗೆ ಎಷ್ಟು ಡಿಸ್ಕೌಂಟ್ ನೀಡುತ್ತಿದೆ ಎಬ ಮಾಹಿತಿಯನ್ನು ಮಾತ್ರ ಕಂಪನಿ ತಿಳಿಸಿಲ್ಲ. ಐಫೋನ್ ಸೀರಿಸ್ ಫೋನ್, ಮ್ಯಾಕ್ ಬುಕ್, ಏರ್ ಪಾಡ್, ಆ್ಯಪಲ್ ವಾಚ್ ಸೇರಿದಂತೆ ಹಲವು ಉತನ್ನಗಳ ಮೇಲೆ ಉತ್ತಮ ಡಿಸ್ಕೌಂಟ್ ನೀಡುವ ನಿರೀಕ್ಷೆಯಿದೆ. ಆ್ಯಪಲ್ ಐಫೋನ್ 16 ಸೀರಿಸ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಹೀಗಾಗಿ ಮಾರಾಟದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಆ್ಯಪಲ್ ದೀಪಾವಳಿ ಆಫರ್ ಅಕ್ಟೋಬರ್ 3ರಿಂದ ಆರಂಭಗೊಳ್ಳಲಿದೆ. ಆದರೆ ಆ್ಯಪಲ್ ಸ್ಟೋರ್ ನಲ್ಲಿ ಕೆಲವು ಆಫರ್ ಗಳಿವೆ. ಉತ್ಪನ್ನ ಖರೀದಿ ಮೇಲೆ ಅಧಿಕೃತ ಸ್ಟೋರ್ ಗಳಲ್ಲಿ 6 ತಿಂಗಳ ವರೆಗೆ ನೋ ಕಾಸ್ಟ್ ಇಎಂಐ ನೀಡುತ್ತಿದೆ. ಹೀಗಾಗಿ ಕಂತುಗಳ ರೂಪದ ಖರೀದಿಯಲ್ಲಿ ಇಎಂಐನಲ್ಲಿ ಹೆಚ್ಚುವರಿ ಶುಲ್ಕವಿರುವುದಿಲ್ಲ.
ಆ್ಯಪಲ್ ಉತನ್ನ ಖರೀದಿಸಲು ಬಯಸುವ ಗ್ರಾಹಕರು ತಮ್ಮ ಹಳೇ ಫೋನ್ ಎಕ್ಸ್‌ಚೇಂಜ್ ಮಾಡಿಕೊಂಡು ಕ್ರೆಡಿಟ್ ಸೇರಿದಂತೆ ಇತರ ಪ್ರಯೋಜನ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಗ್ರಾಹಕರಿಗೆ 3 ತಿಂಗಳ ಕಾಲ ಆ್ಯಪಲ್ ಮ್ಯೂಸಿಕ್ ಉಚಿತವಾಗಿ ಸಿಗಲಿದೆ. ಈ ಆಫರ್ ಜೊತೆ ಇತರ ಕೆಲ ಇನ್‌ಸ್ಟಾಂಟ್ ಆಫರ್‌ಗಳನ್ನು ಆ್ಯಪಲ್ ಸ್ಟೋರ್ ನೀಡುತ್ತಿದೆ. ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಫೆಸ್ಟಿವಲ್ ಸೇಲ್ ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಸದ್ಯ ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಐಫೋನ್ 54,999 ರೂ.ಗೆ ಲಭ್ಯವಿದೆ.