ನವದೆಹಲಿ: ಆಪಲ್ (Apple) ಕಂಪನಿಯ ಇತಿಹಾಸದಲ್ಲೇ ಅತ್ಯಂತ ಸ್ಲಿಮ್ ಆದ ಫೋನ್ ಎನಿಸಿಕೊಂಡಿರುವ ‘ಐಫೋನ್ ಏರ್‘ (iPhone Air) ಈಗ ಹಿಂದೆಂದೂ ಕಾಣದ ಬೆಲೆಗೆ ಮಾರಾಟವಾಗುತ್ತಿದೆ. ಕ್ರೋಮಾ (Croma) ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಈ ಪ್ರೀಮಿಯಂ ಫೋನ್ ಬರೋಬ್ಬರಿ ಅರ್ಧ ಬೆಲೆಗೆ, ಅಂದರೆ ಕೇವಲ 54,900 ರೂ.ಗಳಿಗೆ ಲಭ್ಯವಾಗುತ್ತಿದೆ. ಆದರೆ, ಹಣ ಕೊಡುವ ಮುನ್ನ ಈ ಫೋನ್ ನಿಮಗೆ ಸರಿಹೊಂದುತ್ತದೆಯೇ ಎಂದು ತಿಳಿಯುವುದು ಮುಖ್ಯ.
ಈಗಿರುವ ಫ್ಲ್ಯಾಗ್‌ಶಿಪ್ ಫೋನ್‌ಗಳು ದಪ್ಪವಾಗಿ ಮತ್ತು ಭಾರವಾಗಿ ಬರುತ್ತಿರುವಾಗ, ಅತ್ಯಂತ ತೆಳುವಾದ ವಿನ್ಯಾಸದೊಂದಿಗೆ ಬಂದಿರುವ ಐಫೋನ್ ಏರ್ ಗಮನ ಸೆಳೆದಿದೆ. ನವೆಂಬರ್ 22 ರಿಂದ ನವೆಂಬರ್ 30 ರವರೆಗೆ ನಡೆಯುವ ಸೇಲ್‌ನಲ್ಲಿ ಬ್ಯಾಂಕ್ ಆಫರ್‌ಗಳನ್ನು ಸೇರಿಸಿ ಸುಮಾರು 65,000 ರೂ.ಗಳ ರಿಯಾಯಿತಿಯಲ್ಲಿ ಇದು ಸಿಗುತ್ತಿದೆ.
ನೀವು ಈ ಫೋನ್ ಖರೀದಿಸಬೇಕೇ ಅಥವಾ ಬೇಡವೇ? ಇಲ್ಲಿದೆ ಸ್ಪಷ್ಟ ವಿಶ್ಲೇಷಣೆ:
ಖರೀದಿಸಲು 4 ಬಲವಾದ ಕಾರಣಗಳು:
- ಅತ್ಯಂತ ಸ್ಲಿಮ್ ವಿನ್ಯಾಸ: ಕೇವಲ 5.6mm ದಪ್ಪವಿರುವ ಇದು ಆಪಲ್‌ನ ಅತ್ಯಂತ ತೆಳುವಾದ ಐಫೋನ್. 156 ಗ್ರಾಂ ತೂಕವಿದ್ದು, ಕೈಯಲ್ಲಿ ಹಿಡಿಯಲು ಹಗುರವಾಗಿದೆ. ಇದರ ಟೈಟಾನಿಯಂ ಫ್ರೇಮ್ ಮತ್ತು ಗ್ಲಾಸ್ ಫಿನಿಶ್ ನೋಡಲು ಐಫೋನ್ 17 ಪ್ರೊ ಮ್ಯಾಕ್ಸ್‌ಗಿಂತಲೂ ಹೆಚ್ಚು ಆಕರ್ಷಕವಾಗಿದೆ.
- ಪ್ರೊ-ಲೆವೆಲ್ ಪರ್ಫಾರ್ಮೆನ್ಸ್: ಐಫೋನ್ 17 ಪ್ರೊ ನಲ್ಲಿರುವ ಶಕ್ತಿಶಾಲಿ A19 Pro ಚಿಪ್‌ಸೆಟ್ (ಒಂದು ಜಿಪಿಯು ಕಡಿಮೆ ಇದ್ದರೂ) ಇದರಲ್ಲಿಯೂ ಇದೆ. ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್ ಅನ್ನು ಇದು ಸುಲಭವಾಗಿ ನಿಭಾಯಿಸುತ್ತದೆ.
- ಅದ್ಭುತ ಡಿಸ್‌ಪ್ಲೇ: 6.5-ಇಂಚಿನ OLED ಡಿಸ್‌ಪ್ಲೇ ಜೊತೆಗೆ ಪ್ರೊಮೋಷನ್ (ProMotion) ತಂತ್ರಜ್ಞಾನವಿದೆ. ವಿಡಿಯೋ ಸ್ಟ್ರೀಮಿಂಗ್‌ಗೆ ಇದರ ಸ್ಕ್ರೀನ್ ಐಫೋನ್ 17 ಪ್ರೊಗೆ ಸಮನಾಗಿದೆ.
- ವಿಶಿಷ್ಟ ಕ್ಯಾಮೆರಾ: ಇದೇ ಮೊದಲ ಬಾರಿಗೆ ಸಿಂಗಲ್ ಕ್ಯಾಮೆರಾದಲ್ಲಿ 2x ಟೆಲಿಫೋಟೋ ಜೂಮ್ ನೀಡಲಾಗಿದೆ. ಡಿಜಿಟಲ್ ಕ್ರಾಪಿಂಗ್ ಮೂಲಕವಾದರೂ ಫೋಟೋ ಗುಣಮಟ್ಟ ಉತ್ತಮವಾಗಿದೆ.
ಖರೀದಿಸದಿರಲು 2 ಕಾರಣಗಳು: - ಒಂದೇ ಕ್ಯಾಮೆರಾ: ಇದರಲ್ಲಿ ಇರುವುದು ಒಂದೇ ರಿಯರ್ ಕ್ಯಾಮೆರಾ. ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಲೆನ್ಸ್‌ಗಳ ಕೊರತೆ ನಿಮಗೆ ಕಾಡಬಹುದು. ಬೇಸಿಕ್ ಐಫೋನ್ 17 ರಲ್ಲೂ ಅಲ್ಟ್ರಾವೈಡ್ ಲೆನ್ಸ್ ಇರುವುದನ್ನು ಇಲ್ಲಿ ಗಮನಿಸಬೇಕು.
- ಬ್ಯಾಟರಿ ರಾಜಿ: ಸ್ಲಿಮ್ ವಿನ್ಯಾಸಕ್ಕಾಗಿ ಬ್ಯಾಟರಿಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಐಫೋನ್ 17 ಸಿರೀಸ್‌ಗೆ ಹೋಲಿಸಿದರೆ ಇದರ ಬ್ಯಾಟರಿ ಬಾಳಿಕೆ ಕಡಿಮೆ. ಪವರ್ ಯೂಸರ್ ಆಗಿದ್ದರೆ ಮ್ಯಾಗ್-ಸೇಫ್ (MagSafe) ಬ್ಯಾಟರಿ ಪ್ಯಾಕ್ ಬೇಕಾಗಬಹುದು.
ನೀವು ಸ್ಟೈಲಿಶ್ ಆದ, ಹಗುರವಾದ ಮತ್ತು ಶಕ್ತಿಶಾಲಿ ಫೋನ್ ಹುಡುಕುತ್ತಿದ್ದರೆ 54,900 ರೂ. ಬೆಲೆಗೆ ಐಫೋನ್ ಏರ್ ಅತ್ಯುತ್ತಮ ಡೀಲ್. ಆದರೆ, ನಿಮಗೆ ದಿನವಿಡೀ ಬರುವ ಬ್ಯಾಟರಿ ಮತ್ತು ಬಹುಮುಖ ಕ್ಯಾಮೆರಾ ಬೇಕಿದ್ದರೆ ಬೇರೆ ಆಯ್ಕೆ ನೋಡುವುದು ಉತ್ತಮ.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ‘ಸನ್‌ಡೌನರ್ ಆರೆಂಜ್’ ಸ್ಪೆಷಲ್ ಎಡಿಷನ್ ಬಿಡುಗಡೆ ; ಪೂರ್ಣ ವಿವರ ಇಲ್ಲಿದೆ



















