ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಕ್ಷುಲ್ಲಕ ಕಾರಣಕ್ಕೆಲ್ಲ ಜನರಿಗೆ ಪ್ರಾಣ ಬೆದರಿಕೆ ಹಾಗೂ ಹಲ್ಲೆ ಮಾಡುತ್ತಿರುವ ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ.
ಯುವಕನೊಬ್ಬ ಫ್ರೀ ಯಾಗಿ ಸಿಗರೇಟ್ (cigarette) ಕೊಡದಿದ್ದಕ್ಕೆ ಬೇಕರಿ ಯುವಕನ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕುಡಿದ ನಶೆಯಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಈ ಘಟನೆ ಚಿಕ್ಕಬಿದರಿಕಲ್ಲು ಮುಖ್ಯ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಆನಂದ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಪುಂಡಾಟ ಮೆರೆದಿದ್ದಾನೆ. ಫ್ರೀ ಯಾಗಿ ಸೆಗರೇಟ್ ಕೊಡದಿದ್ದಕ್ಕೆ ಗ್ರಾಹಕರನ್ನು ಅಡ್ಡಗಟ್ಟಿ ಬೇಕರಿ ಯುವಕನಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಕಾಂಡಿಮೆಂಟ್ಸ್ ಬೇಕರಿಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಧಾಂಧಲೆ ಮಾಡಿದ್ದಾನೆ. ಸಿಗರೇಟ್ ಕೊಡದಿದ್ದರೆ ಅಂಗಡಿ ಮುಚ್ಚಿಸುತ್ತೇನೆ ಎಂದು ಅವಾಜ್ ಹಾಕಿ ವಿಕೃತಿ ಮೆರೆದಿದ್ದಾನೆ.
ಘಟನೆಯನ್ನು ಖಂಡಿಸಿರುವ ಕಾರ್ಮಿಕ ಪರಿಷತ್,(Labor Council) ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.