ಬೆಂಗಳೂರು: ರಾಜ್ಯದಲ್ಲಿ 2025-26 ನೇ ಸಾಲಿನ ಬಜೆಟ್ ಮಂಡಿಸುವ, ಬಜೆಟ್ ಅಧಿವೇಶನ ಅಂತಲೇ ಕರೆಯಲ್ಪಡುವ ಸದನ ಮುಕ್ತಾಯವಾಗಿದೆ.
ಮಾರ್ಚ್ 3 ರಿಂದ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನ ನಿನ್ನೆ ಅಂದರೆ ಮಾರ್ಚ್ 21 ರಂದು ಮುಕ್ತಾಯವಾಗಿದೆ. ಈ ಅಧಿವೇಶನದಲ್ಲಿ ಮಾರ್ಚ್ 3 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಎರಡು ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನ್ನಾಡಿದರೆ, ಇತ್ತ ಮಾರ್ಚ್ 7 ರಂದು ಸಿಎಂ ಸಿದ್ಧರಾಮಯ್ಯ ತಮ್ಮ ದಾಖಲೆಯ 16 ನೇ ಬಜೆಟ್ ಮಂಡಿಸಿದ್ದರು. ಇನ್ನು ಎರಡು ಸದನಗಳಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿದ್ದು, ಕೆಲ ವಿಧೇಯಕಕ್ಕೆ ಸರ್ಕಾರ ತಿದ್ದುಪಡಿ ತಂದ್ರೆ, ಕೆಲವೊಂದು ಹೊಸ ವಿಧೇಯಕಗಳನ್ನು ಶಾಸನ ರಚನೆ ಮಾಡುವ ಮೂಲಕ ಸರ್ಕಾರ ಹೊಸ ಪದ್ಧತಿಗೆ ನಾಂದಿ ಹಾಡಿತು.