ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿನ ಪಂಚ ಪಾಲಿಕೆಗಳು ಮಾ.25 ಮತ್ತು 26ರಂದು 2026-27ನೇ ಸಾಲಿನ ಆಯವ್ಯಯ ಮಂಡಿಸಲಿವೆ. ಪ್ರತಿಯೊಂದು ಪಾಲಿಕೆ ಬಜೆಟ್ ಗಾತ್ರ 4 ರಿಂದ 6 ಸಾವಿರ ಕೋಟಿ ರೂ. ಇರಲಿದೆ.
ರಾಜಧಾನಿಯಲ್ಲಿ ಹೊಸದಾಗಿ ರಚಿತವಾಗಿರುವ 5 ನಗರ ಪಾಲಿಕೆಗಳು ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಆಯವ್ಯಯ ಮಂಡನೆ ಮಾಡಲಿವೆ. ಆಯಾ ಪಾಲಿಕೆಗಳು ಆದಾಯ ಸ್ವೀಕೃತಿ, ವೆಚ್ಚ ಆಧರಿಸಿ ಬಜೆಟ್ ಗಾತ್ರವನ್ನು ಸಿದ್ಧಪಡಿಸಿವೆ. ರಸ್ತೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಉದ್ಯಾನ, ಶಾಲಾ-ಕಾಲೇಜುಗಳ ನಿರ್ವಹಣೆ, ಕಸದ ಸಮಸ್ಯೆ ಹಾಗೂ ಇನ್ನಿತರೆ ಮೂಲಸೌಕರ್ಯಗಳ ಕೊರತೆಗಳ ನಿವಾರಣೆಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಿವೆ.
ಬಿಬಿಎಂಪಿ ಅಸ್ತಿತ್ವದಲ್ಲಿದ್ದ 2025-26ನೇ ಸಾಲಿನಲ್ಲಿ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದ ಆಯವ್ಯಯ ಮಂಡಿಸಲಾಗಿತ್ತು. ಈ ಸಲ 5 ನಗರ ಪಾಲಿಕೆಗಳ ಬಜೆಟ್ ಗಾತ್ರವು 25 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಗಳಿವೆ.
ಮಾ.25ರಂದು ಪೂರ್ವ ನಗರ ಪಾಲಿಕೆ ಹಾಗೂ ದಕ್ಷಿಣ ನಗರ ಪಾಲಿಕೆಯು ಬಜೆಟ್ ಮಂಡಿಸಲಿವೆ. ಮಾ.26ರಂದು ಉತ್ತರ, ಪಶ್ಚಿಮ ಮತ್ತು ಕೇಂದ್ರ ನಗರ ಪಾಲಿಕೆಗಳು ಆಯವ್ಯಯ ಮಂಡಿಸಲು ತಯಾರಿ ಮಾಡಿಕೊಂಡಿವೆ.
ಎಲ್ಲೆಲ್ಲಿ?
ಪೂರ್ವ ನಗರ ಪಾಲಿಕೆ- ಕೆ.ಆರ್.ಪುರ
ದಕ್ಷಿಣ ನಗರ ಪಾಲಿಕೆ- ಜಯನಗರ
ಕೇಂದ್ರ ನಗರ ಪಾಲಿಕೆ- ಮೆಯೋ ಹಾಲ್, ಎಂ.ಜಿ. ರಸ್ತೆ
ಪಶ್ಚಿಮ ನಗರ ಪಾಲಿಕೆ- ಐಧಿಪಿಪಿ ಕೇಂದ್ರ, ಮಲ್ಲೇಶ್ವರ
ಉತ್ತರ ನಗರ ಪಾಲಿಕೆ- ಅಂಬೇಡ್ಕರ್ ಭವನ, ಯಲಹಂಕ



















