ಬಡವರು, ಯುವಕರು ಹಾಗೂ ಮಹಿಳಾ ಕೇಂದ್ರಿತ ಬಜೆಟ್ ಎಂದು ಬಣ್ಣಿಸಿರುವ 2025-26 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ ಮಂಡಿಸಿದರು. ಬಜೆಟ್‌ನಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಕೃಷಿ ಕ್ಷೇತ್ರದ ನಿರುದ್ಯೋಗ ಸಮಸ್ಯೆ(Unemployment problem) ನಿವಾರಣೆ, ಇದರಿಂದ 1.7 ಕೋಟಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಧಾರಣಾ ಕ್ರಮ.ಹೆಚ್ಚಿನ ಇಳುವರಿ ನೀಡುವ ಬಿತ್ತನೆ ಬೀಜಗಳ ಸಂಶೋಧನೆ, ಉತ್ಪಾದನೆಗೆ ರಾಷ್ಟ್ರೀಯ ಮಿಷನ್ ಆರಂಭ.
ಹತ್ತಿ ಉತ್ಪಾದನೆ ಹೆಚ್ಚಿಸಲು ಪಂಚವಾರ್ಷಿಕ ಕಾರ್ಯಕ್ರಮ ಘೋಷಣೆ.
ಭಾರತೀಯ ಅಂಚೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸಲು ಕ್ರಮ.
ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ಗಳ ಸ್ಥಾಪನೆ.
ವೈದ್ಯಕೀಯ ಸಂಸ್ಥೆಗಳಲ್ಲಿ 10 ಸಾವಿರ ಹೆಚ್ಚುವರಿ ಸೀಟುಗಳ ಸೇರ್ಪಡೆ, ಮುಂದಿನ ಐದು ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಕ್ರಮ. 7.7 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ; ಸಾಲದ ಮಿತಿ 5 ಲಕ್ಷ ರೂ.ಗೆ ಹೆಚ್ಚಿಸಲು ಕ್ರಮ.
MSMEಗಳಿಗೆ 20 ಕೋಟಿ ರೂ.ವರೆಗೆ ಅವಧಿ ಸಾಲ ವಿತರಣೆ.
120 ನಗರಗಳಿಗೆ ಉಡಾನ್ ಯೋಜನೆ ವಿಸ್ತರಣೆ. ಅಗ್ಗದ ವಿಮಾನ ಪ್ರಯಾಣ ಸೇವೆ ಒದಗಿಸುವ ಗುರಿ.
2025 ರಲ್ಲಿ 40,000 ವಸತಿ ಘಟಕಗಳನ್ನು ಪೂರ್ಣಗೊಳಿಸುವ ಭರವಸೆ.
ರಾಜ್ಯಗಳ ಸಹಕಾರದೊಂದಿಗೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ನಿರ್ಧಾರ, ದೇಶದ ಅಗ್ರ 50 ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ.
ಭವಿಷ್ಯದ ಆಹಾರ ಭದ್ರತೆಗಾಗಿ ಎರಡನೇ ಜೀನ್ ಬ್ಯಾಂಕ್ ಸ್ಥಾಪನೆ.
ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಸೌಲಭ್ಯ ವಿತರಣೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಜಾರಿಗೆ ನಿರ್ಧಾರ.
100 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲು ಜಾನ್ ವಿಶ್ವಾಸ್ ಮಸೂದೆ 2.೦ ಜಾರಿ.
10.18 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಮೀಸಲಿಗೆ ನಿರ್ಧಾರ.
14.82 ಲಕ್ಷ ಕೋಟಿ ರೂ. ಒಟ್ಟು ಮಾರುಕಟ್ಟೆ ಸಾಲಗಳು.
82 ಸುಂಕ ರೇಖೆಗಳ ಮೇಲಿನ ಸಮಾಜ ಕಲ್ಯಾಣದ ಸರ್‌ಚಾರ್ಜ್ ಮನ್ನಾ.
36 ಜೀವರಕ್ಷಕ ಔಷಧಗಳನ್ನು ಕಸ್ಟಮ್ಸ್ ಸುಂಕದಿಂದ ವಿನಾಯಿತಿ.
ಸುಂಕ ರಹಿತ ಇನ್‌ಪುಟ್ ವ್ಯಾಪ್ತಿಗೆ 9ಕರಕುಶಲ ವಸ್ತುಗಳ ಸೇರ್ಪಡೆ .
ಮಧ್ಯಮ ವರ್ಗದ ಮೇಲೆ ವಿಶೇಷ ಗಮನ ಹರಿಸಿ ವೈಯಕ್ತಿಕ ತೆರಿಗೆಯಲ್ಲಿ ಸುಧಾರಣೆ ಕೈಗೊಂಡಿದ್ದಾರೆ.