ಪುನೀತ್ ರಾಜಕುಮಾರ್ (Puneeth Rajkumar) 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಸೋದರತ್ತೆ ನಾಗಮ್ಮ ಶುಭ ಕೋರಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮಗೆ ಅಪ್ಪು ಇಲ್ಲದೇ ಇರೋದು ಗೊತ್ತೇ ಇಲ್ಲ. ಅಸಲಿ ವಿಚಾರ ತಿಳಿಯದೇ ಅಪ್ಪುಗೆ ಹಿರಿಯ ಜೀವ ಶುಭಾಶಯ ತಿಳಿಸಿದೆ.
ಈ ವಿಡಿಯೋ ಈಗ ವೈರಲ್ ಆಗಿದೆ. ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡಿಕೊಂಡು ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ. ಆದರೆ, ಅವರಿಗೆ ಅಪ್ಪು ಇಲ್ಲದಿರುವ ವಿಷಯ ಮಾತ್ರ ಗೊತ್ತೇ ಇಲ್ಲ.
ವಿಡಿಯೋದಲ್ಲಿ ಅಪ್ಪು ಬಗೆಗಿನ ಒಂದು ಘಟನೆಯನ್ನು ಕೂಡ ನೆನೆಪಿಸಿಕೊಂಡಿದ್ದಾರೆ. ಪುನೀತ್ 46ನೇ ವಯಸ್ಸಿಯಲ್ಲಿ ನಿಧನರಾಗಿದ್ದಾರೆ. 2021ರ ಅಕ್ಟೋಬರ್ 2ರಂದು ಅಪ್ಪು ಇಹಲೋಕ ತ್ಯಜಿಸಿದ್ದಾರೆ.