ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿನಲ್ಲಿ 8 ವಿಚಾರಗಳಿವೆ. ಪ್ರತಿಯೊಂದು ವಿಚಾರವೂ ಬೆಂಗಳೂರಿಗಾಗಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬಿಬಿಎಂಪಿ ಬಜೆಟ್ ಮಂಡನೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಖರ್ಚುಗಳ ಬಗ್ಗೆ ಜನರು, ತಜ್ಞರು ಸಲಹೆ ಕೊಟ್ಟಿದ್ದಾರೆ. ಅದೇ ರೀತಿ ಯೋಜನೆ ಜಾರಿಗೆ ತರಲಾಗಿದೆ. ವೈಬ್ರಂಟ್ ಬೆಂಗಳೂರಿಗಾಗಿ ಬಜೆಟ್ ಮಿಸಲಿಟ್ಟಿದ್ದೇವೆ. ತೆರಿಗೆ ದರ ಹೆಚ್ಚಳ ಮಾಡುತ್ತಿಲ್ಲ. ಏಳು ಲಕ್ಷ ಮನೆಗಳು ಔಟ್ ಸೈಟ್ ನೆಟವರ್ಕ್ ಇವೆ. ಕಂದಾಯ ಇಲಾಖೆ ಡ್ರೋನ್ ಸರ್ವೇ ಮಾಡಿದೆ. ಎಷ್ಟು ಅಡಿಗಳು ಕಟ್ಟಡ ಇದೆಯೋ ಅದನ್ನು ರಿವಿಜನ್ ಮಾಡುತ್ತೇವೆ. ಇದರಿಂದ ಯಾರೂ ಪಾರಾಗಲು ಸಾಧ್ಯವಿಲ್ಲ. ತಪ್ಪಿಸಿಕೊಂಡವರಿಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ.