ದಾವಣಗೆರೆ: ಬ್ರಾಹ್ಮಣರ ಜನಿವಾರಕ್ಕೆ ಅಪಮಾನವಾಗಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಜನಿವಾರದ ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಇದನ್ನು ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು. ಬ್ರಾಹ್ಮಣ ಸಮುದಾಯ ಹೊರತು ಪಡಿಸಿ ಇತರರು ಜನಿವಾರ ಧರಿಸುತ್ತಾರೆ. ಯಾವುದೇ ಸಮುದಾಯಕ್ಕೆ ಭಾವನೆಗಳಿಗೆ ಧಕ್ಕೆ ಆಗದ ರೀತಿ ಸೂಕ್ತ ಸೂಚನೆಗಳನ್ನು ಸಿಎಂ ನೀಡಬೇಕು ಎಂದು ಹೇಳಿದ್ದಾರೆ.
ಜಾತಿ ಜನಗಣತಿ ವಿಚಾರದಲ್ಲಿ ಸಿಎಂ ಹುಡುಗಾಟಿಕೆ ಮಾಡುತ್ತಿದ್ದಾರೆ. ಎಲ್ಲ ಸಮುದಾಯದವರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಉದ್ಧೇಶ. ತಮ್ಮ ಕುರ್ಚಿ ಅಲುಗಾಡುತ್ತಿರುವುದಕ್ಕೆ ಜಾತಿ ಜನಗಣತಿ ತಂದಿದ್ದಾರೆ. ಜಾತಿ ಜನಗಣತಿ ಇಟ್ಟುಕೊಂಡು ಜಾತಿ ಜಾತಿಗಳ ಮಧ್ಯೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಎಲ್ಲ ಶೋಷಿತ ಸಮುದಾಯಕ್ಕೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಉದ್ಧೇಶ. ಜಾತಿ ಜನಗಣತಿ ವಿಚಾರವಾಗಿ ಎರಡು ಕ್ಯಾಬಿನೆಟ್ ಸಭೆ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಇದು ಜಾರಿಯಾಗೋಕೆ ಒಂದು ವರ್ಷ ಬೇಕು ಅಂತಾರೆ. ಜಾತಿ ಜನಗಣತಿ ಜಾರಿ ವಿಚಾರದಲ್ಲಿ ಸಿಎಂ ಇಚ್ಚಾ ಶಕ್ತಿ ಇಲ್ಲ. ಇದ್ದಿದ್ದರೆ ಇಷ್ಟೊತ್ತಿಗೆ ಜಾರಿ ಆಗುತ್ತಿತ್ತು. ಈ ವಿಚಾರದಲ್ಲಿ ಸಿಎಂ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಮೂರರನೇ ಹಂತದ ಜನಾಕ್ರೋಶ ಮಾಡುತ್ತಿದ್ದೇವೆ. 5 ದಿನ ಮಾಡ್ತೀವಿ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಜಾಸ್ತಿ ಆಗುತ್ತಿದೆ. ಮುಖ್ಯ ಮಂತ್ರಿಗಳು ಗ್ಯಾರಂಟಿ ಭ್ರಮೆಯಲ್ಲಿದ್ದಾರೆ. ಸಿಎಂ, ಸಚಿವರು ಬೆಂಗಳೂರಿಗೆ ಸೀಮಿತಾರಾಗಿದ್ದಾರೆ. ಅವರಿಗೆ ಜನರ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದಾರೆ.



















