ಬ್ರಹ್ಮಾವರ : ಮಗುವನ್ನು ನೇಣಿಗೆ ಹಾಕಿ ನಂತರ ತಾಯಿಯೂ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾದ ಘಟನೆ ಬ್ರಹ್ಮಾವರ ತಾಲೂಕಿನ ಕುಂಜಾಲು ಸಮೀಪದ ಹೇರಂಜೆ ಕ್ರಾಸ್ ಎಂಬಲ್ಲಿ ಇಂದು(ಸೋಮವಾರ) ಮಧ್ಯಾಹ್ನ ಹೊತ್ತಿಗೆ ನಡೆದಿರುವುದಾಗಿ ತಿಳಿದು ಬಂದಿದೆ.
ಮೃತರನ್ನು ಸ್ಥಳೀಯ ನಿವಾಸಿ ಸುಶ್ಮಿತಾ (35) ಹಾಗೂ ಅವರ ಮಗು ಶ್ರೇಷ್ಠ (1ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ.
“ನನ್ನ ಸಾವಿಗೆ ನಾನೇ ಕಾರಣ” ಎಂಬುದಾಗಿ ಮರಣ ಪತ್ರ ಬರೆದಿಟ್ಟು ಸುಶ್ಮಿತಾ ತನ್ನ ಮಗುವಿನೊಂದಿಗೆ ನೇಣಿಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.