ಚಿತ್ರದುರ್ಗ: ನಾಯಿಗಳ ದಾಳಿಗೆ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ನಡೆದಿದೆ. ಟ್ಯೂಷನ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ. ರಾಂಪುರ ಗ್ರಾಮದ ಚನ್ನ ಮಲ್ಲಿಕಾರ್ಜುನಯ್ಯರ ಮಗ ಸಿ.ಮಿಥುನ್(11) ಸಾವನ್ನಪ್ಪಿರುವ ದುರ್ದೈವಿ ಬಾಲಕ.
ಶಾಲೆ ರಜೆ ಇದ್ದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಯಾರೂ ಇರಲಿಲ್ಲ. ಆದರೆ, ಶಾಲೆಯ ಯಾವುದೋ ಕಟ್ಟಡದಲ್ಲಿ ಟ್ಯೂಷನ್ ಹೇಳಲಾಗುತ್ತಿತ್ತು. ಈ ವೇಳೆ ದಾಳಿಗೆ ಬಲಿಯಾಗಿದ್ದಾನೆ. ಈ ವೇಳೆ ರಾಜು ಎಂಬ ವ್ಯಕ್ತಿ ಆಟೋ ಮೂಲಕ ತೆರಳುತ್ತಿದ್ದರು. ಕೂಡಲೇ ನಾಯಿಗಳನ್ನು ಓಡಿಸಿದ್ದಾರೆ. ರಕ್ತ ಸುರಿಯುತ್ತಿದ್ದ ಬಾಲಕನನ್ನು ಆಟೋದಲ್ಲಿ ರಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ, ಆರೋಗ್ಯ ಕೇಂದ್ರದವರು ಮಗುವನ್ನು ಬಳ್ಳಾರಿ ವಿಮ್ಸ್ ಗೆ ದಾಖಲಿಸಲು ಹೇಳಿದ್ದಾರೆ. ಆದರೆ, ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.