ಪ್ರಭಾಸ್ ಸಿನಿಮಾಗೆ ಬಾಯ್, ಅಲ್ಲು ಅರ್ಜುನ್ ಸಿನಿಮಾಗೆ ಹಾಯ್. ಯೆಸ್, ಕನ್ನಡತಿ ದೀಪಿಕಾ ಪಡಕೋಣೆ, ಇದೀಗ ಅಲ್ಲು ಅರ್ಜುನ್ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ.
ಜವಾನ್ ಚಿತ್ರ ನಿರ್ದೇಶಕ ಅಟ್ಲಿ ನಿರ್ದೇಶನದ ಹೊಸ ಫಿಲ್ಮ್ ನಲ್ಲೀಗ ದೀಪಿಕಾ ನಟಿಸುವುದು ಪಕ್ಕಾ ಆಗಿದೆ. ಭಾರತದ ಅತಿ ದೊಡ್ಡ ಸೈನ್ಸ್ ಫಿಕ್ಷನ್ ಮೂವಿಯಲ್ಲಿ ಇದೀಗ ದೀಪಿಕಾ ನಟಿಯಾಗ್ತಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ವಿಭಿನ್ನ ಮತ್ತು ತಾಂತ್ರಿಕವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಸಿನಿಮಾದಲ್ಲೀಗ ದೀಪಿಕಾ ನಟಿಸಿದ್ದಾರೆ.
ಈ ಅವಕಾಶಕ್ಕಾಗಿಯೇ ಪ್ರಭಾಸ್ ಜೊತೆಗಿನ ಸ್ಪಿರಿಟ್ ನಿಂದ ನಟಿ ಹೊರ ಬಂದ್ರಾ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ಸಂಭಾವನೆ, ದಿನದ ಕೆಲಸದ ಅವಧಿ ಕಿರಿಕ್ ನಿಂದಲೇ ದೀಪಿಕಾ ಸ್ಪಿರಿಟ್ ನಿಂದ ಹೊರ ಬಂದಿದ್ದರು ಎನ್ನಲಾಗುತ್ತಿತ್ತು. ಆದರೀಗ ಅಲ್ಲು ಅರ್ಜುನ್ ಹೊಸ ಸಿನಿಮಾಗೆ ಸಹಿ ಮಾಡೋ ಮೂಲಕ ಸ್ಪಿರಿಟ್ ಕೈಬಿಟ್ಟಿದ್ದೇಕೆ ಅನ್ನೋದನ್ನು ದೀಪಿಕಾ ಸಾಬೀತು ಮಾಡಿದ್ದಾರೆ.