ಚಾಮರಾಜನಗರ: ಚಿರತೆವೊಂದನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಚಾಮರಾಜನಗರ ತಾಲೂಕಿನ ಕರದನಹಳ್ಳಿ ಗ್ರಾಮದ ಅಲ್ಲಾ ಬಕಾಸ್ ಎಂಬ ರೈತನಿಗೆ ಸೇರಿದ್ದ ಕರುವೊಂದನ್ನು ಚಿರತೆ ತಿಂದುಹಾಕಿತ್ತು. ಚಿರತೆಯ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದರು.
ಈ ಹಿನ್ನೆಲೆ ಅರಣ್ಯ ಇಲಾಖೆಯವರು ಅಲ್ಲಾ ಬಕಾಸ್ ಅವರ ಜಮೀನಿನಲ್ಲಿ ಬೋನ್ ಅಳವಡಿಸಿದ್ದರು. ಮತ್ತೆ ಜಾನುವಾರುಗಳನ್ನು ಭೇಟೆಯಾಡಲು ಬಂದ ಚಿರತೆಯು ಬೋನ್ ನಲ್ಲಿ ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ಬಿ.ಆರ್.ಟಿ ಅರಣ್ಯಕ್ಕೆ ರವಾನಿಸಲಾಗಿದೆ.