ಲಕ್ನೋ: ಇಲ್ಲಿನ ಹೋಟೆಲ್ ಗಳಿಗೆ ಹಣಕ್ಕಾಗಿ ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿನ 10 ಹೋಟೆಲ್ ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿ, 45 ಲಕ್ಷ ರೂ. ಗೆ ಬೇಡಿಕೆ ಇಡಲಾಗಿದೆ. ಮ್ಯಾರಿಯಟ್, ಫಾರ್ಚೂನ್ ಪಾರ್ಕ್ ಬಿಬಿಡಿ, ಸರಕಾ ಹೋಟೆಲ್, ದಿ ಪಿಕ್ಯಾಡಿಲಿ, ಕಂಫರ್ಟ್ ಹೋಟೆಲ್ ವಿಸ್ಟಾ, ಕ್ಲರ್ಕ್ ಅವಧ್, ದಯಾಳ್ ಗೇಟ್‌ವೇ, ಹೋಟೆಲ್ ಸಿಲ್ವೆಟ್ ಸೇರಿದಂತೆ ಇನ್ನಿತರ ಹೋಟೆಲ್ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಹಣಕ್ಕೆ ಬೇಡಿಕೆ ಇಡಲಾಗಿದೆ. 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ನೆಲದ ಮಹಡಿಯಲ್ಲಿ ಸ್ಫೋಟಕ ವಸ್ತುಗಳಿವೆ. ನೀವು ಹಣ ಕೊಡದಿದ್ದರೆ, ಹೋಟೆಲ್ ಸ್ಫೋಟಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನಗೆ ಹಣ ಬೇಕು ಇಲ್ಲವಾದರೆ ನಾನು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ. ರಕ್ತಪಾತವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಇಮೇಲ್‌ಗೆ [email protected] ಸಂಪರ್ಕಿಸುವಂತೆ ದುಷ್ಕರ್ಮಿ ಹೇಳಿದ್ದಾರೆ.