ಬೆಂಗಳೂರು: ನಗರ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಕುರಿತಾಗಿ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುವುದಿಲ್ಲ. ಮೇಲ್ ಮಾಡಿದವರನ್ನು ಬಂಧಿಸಿಯೇ ಸಿದ್ಧ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮಾತ್ರವಲ್ಲದೆ, ಮಲೇಷ್ಯಾ, ಅಲ್ಜಿರಿಯಾ, ಯುನೈಟೆಡ್ ಸ್ಟೇಟ್ಸ್‌ಗಳಲ್ಲಿಯೂ ಈ ಹಿಂದೆ ಬೆದರಿಕೆ ಕರೆ ಬಂದಿತ್ತು. ಕಳೆದ ಬಾರಿಯೂ 40ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿತ್ತು. ನಾವು ಎಲ್ಲವನ್ನು ಪರಿಶೀಲಿಸಿದ್ದೆವು. ಯಾವುದನ್ನು ನಿರ್ಲಕ್ಷಿಸಲು ಅಗುವುದಿಲ್ಲ. ಈಗ ಬಂದಿರುವ ಮೇಲ್‌ಗಳನ್ನು ಬೆಂಗಳೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಮೇಲ್ ಮಾಡಿರುವರನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.



















