ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ ಬಂದಿದೆ.
6 ವಿಮಾನಗಳಲ್ಲಿ ಇಬ್ಬರು ಸೇರಿದಂತೆ ಒಟ್ಟು 12 ಬಾಂಬರ್ ಗಳಿರುವುದಾಗಿ ಅನಾಮಧೇಯ ಟ್ವಿಟರ್ ಖಾತೆಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹುಸಿ ಬಾಂಬ್ ಬೆದರಿಕೆ ಮೆಸೇಜ್ ಮಾಡಿದವರ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಷ್ಕರ್ಮಿಗಳು ಇಂಡಿಗೋ ಏರ್‌ಲೈನ್ಸ್‌ನ IX 233, IX 375, IX 481, IX 383, IX 549, IX 399 ವಿಮಾನಗಳಲ್ಲಿ ಬಾಂಬರ್ ಗಳಿರುವುದಾಗಿ ಟ್ವೀಟ್ ಕಳುಹಿಸಿದ್ದಾರೆ. ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‌ಗಳಿಂದ ತೆರಳುವ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದ್ದು, ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಹಾಗೂ ಏರ್ ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿದ್ದರು. ಈ ಮೂಲಕ ಒಂದು ವಾರದಲ್ಲಿ ಎರಡನೇ ಸಲ ಬಾಂಬ್ ಬೆದರಿಕೆಯ ಕರೆ ಬಂದಂತಾಗಿದೆ.