ಮುಂಬಯಿನಲ್ಲಿ ಆತಂಕ ಸೃಷ್ಟಿಸಿದ ಬಾಂಬ್ ಬೆದರಿಕೆ ಕರೆ. ಹೌದು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಐಕಾನಿಕ್ ತಾಜ್ ಹೋಟೆಲ್ ಗಳನ್ನು ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಲಾಗಿದೆ.
ಏರ್ ಪೋರ್ಟ್ ಪೊಲೀಸರಿಗೆ ಇ ಮೇಲ್ ಮೂಲಕ ಈ ಬೆದರಿಕೆ ಒಡ್ಡಲಾಗಿದ್ದು, ಮುಂಬೈನ ಎರಡು ಪ್ರತಿಷ್ಠಿತ ತಾಣಗಳನ್ನು ಬಾಂಬ್ ಟಾರ್ಗೆಟ್ ಮಾಡಿದ್ದೇವೆ ಅಂತಾ ಹೇಳಲಾಗಿದೆ. ಬಾಂಬ್ ಬೆದರಿಕೆ ಕರೆ ಬೆನ್ನಲ್ಲೇ ಮುಂಬೈನಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲೆಡೆ ತೀವ್ರ ಶೋಧ ಕಾರ್ಯ ನಡೆದಿದೆ. ಉಗ್ರ ಅಫ್ಜಲ್ ಗುರು ಗಲ್ಲು ಶಿಕ್ಷೆಗೆ ಪ್ರತೀಕಾರವಾಗಿ ಈ ಬಾಂಬ್ ದಾಳಿ ಅಂತಲೂ ಬೆದರಿಕೆ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಮುಂಬೈ ಪೊಲೀಸರು ಹಾಗೂ ಬಾಂಬ್ ನಿಶ್ಕ್ರಿಯ ಪಡೆಗಳು ಶೋಧ ಮುಂದುವರಿಸಿದ್ದು, ಎಲ್ಲೆಡೆ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ.


















