ಚಂಪಾವತ್ : ಉತ್ತರಾಖಂಡದ ಚಂಪಾವತ್ ತನಕ್ಪುರ-ಪಿಥೋರಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಾಗ್ಧಾರ ಬಳಿ ಮದುವೆ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಬೊಲೆರೊ ಜೀಪ್ ಬೆಳಗಿನ ಜಾವ 2.30ರ ಸುಮಾರಿಗೆ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.

ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ಪಡೆದ ಲೋಹಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಕುಮಾರ್ ಸಿಂಗ್ ನೇತೃತ್ವದ ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ತಂಡವು ಕಾರ್ಯಾಚರಣೆ ಪ್ರಾರಂಭಿಸಿ, ಗಾಯಾಳುಗಳನ್ನು ಹೊರತೆಗೆದು ಲೋಹಘಾಟ್ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದೆ.
ಮೃತರನ್ನು ಭಾವನಾ ಚೌಬೆ, ಅವರ ಮಗ ಪ್ರಿಯಾಂಶು, ಪ್ರಕಾಶ್ ಚಂದ್ರ ಉನಿಯಾಲ್ (40), ಕೇವಲ್ ಚಂದ್ರ ಉನಿಯಾಲ್ (35), ಮತ್ತು ಸುರೇಶ್ ನೌಟಿಯಾಲ್ (32) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು | 82 ಲಕ್ಷಕ್ಕೆ ಲೆಕ್ಕ ಕೊಟ್ಟ ದರ್ಶನ್!



















