ನವದೆಹಲಿ: ಇತ್ತೀಚೆಗಷ್ಟೇ ಅಹಮದಾಬಾದ್ ನಲ್ಲಿ ವಿಮಾನ ಅವಘಡ ಸಂಭವಿಸಿ ಹಲವಾರು ಸಾವು-ನೋವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಬೋಯಿಂಗ್ ವಿಮಾನಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸುಮಾರು 5 ಅಂತಾರಾಷ್ಟ್ರೀಯ ವಿಮಾನಗಳ ಸೇವೆ ರದ್ದಾಗಿದೆ.
AI 915 (ದೆಹಲಿ-ದುಬೈ), AI 153 (ದೆಹಲಿ-ವಿಯೆನ್ನಾ), AI 143 (ದೆಹಲಿ-ಪ್ಯಾರಿಸ್), AI 159 (ಅಹಮದಾಬಾದ್-ಲಂಡನ್), ಮತ್ತು AI 170 (ಲಂಡನ್-ಅಮೃತಸರ) ವಿಮಾನಗಳ ಹಾರಾಟ ಸೇವೆ ಇಂದು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿತ್ತು. ಆನಂತರ “ಕಡ್ಡಾಯ ಪೂರ್ವ-ವಿಮಾನ ತಪಾಸಣೆಗಳು ಸಮಸ್ಯೆ ಎದುರಾಯಿತು. ಹೀಗಾಗಿ ಏರ್ ಇಂಡಿಯಾ AI 143 ದೆಹಲಿ-ಪ್ಯಾರಿಸ್ ವಿಮಾನವನ್ನು ಕೂಡ ರದ್ದು ಮಾಡಿತು.
“ನಮ್ಮ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಹೋಟೆಲ್ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದೇವೆ. ಪ್ರಯಾಣಿಕರು ಒಪ್ಪಿದರೆ ರದ್ದತಿಗಾಗಿ ಪೂರ್ಣ ಮರುಪಾವತಿ ಅಥವಾ ಉಚಿತ ರೀ-ಶೆಡ್ಯೂಲ್ ಸಹ ನೀಡುತ್ತಿದ್ದೇವೆ” ಎಂದು ವಿಮಾನಯಾನ ಸಂಸ್ಥೆ ಹೇಳಿದೆ.