ಬೆಂಗಳೂರು : ಡೇಟಿಂಗ್ ಆ್ಯಪ್ ಮೂಲಕ ಯುವಕನಿಗೆ ವಂಚಿಸಿ, ಹಣ ಮತ್ತು ಚಿನ್ನ ದೋಚಿದ್ದ ಖತರ್ನಾಕ್ ಜೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಕವಿಪ್ರಿಯಾ ಹಾಗೂ ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಈ ಇಬ್ಬರು ಕೂಡ ತಮಿಳುನಾಡು ಮೂಲದವರಾಗಿದ್ದು, ನಗರದ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. Happen ಡೇಟಿಂಗ್ ಆ್ಯಪ್ನಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದ ಈ ಜೋಡಿ, ನಗರದ ಯುವಕನಿಗೆ ಡೇಟಿಂಗ್ ಆ್ಯಪ್ನಲ್ಲೇ ಬಲೆ ಬೀಸಿದ್ದರು.
ಯುವಕ ಕೂಡ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದ. ಯುವಕನ ಮಾಹಿತಿ ಸಂಗ್ರಹಿಸಿದ ಯುವತಿ ಆತನ ಜೊತೆ ಫ್ರೆಂಡ್ ಶಿಫ್ ಮಾಡಿದ್ದಳು. ಇಬ್ಬರು ಕೂಡ ಒಂದು ತಿಂಗಳಿಂದ ಪರಿಚಿತರಾಗಿದ್ದು, ನವೆಂಬರ್ ಹನ್ನೊಂದರಂದು ಇಂದಿರಾನಗರದ ಲಾಡ್ಜ್ವೊಂದರಲ್ಲಿ ಭೇಟಿಯಾಗಿದ್ದರು. ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿ ಊಟ ಮಾಡಿದ್ದಾರೆ. ನಂತರ ಸ್ವಲ್ಪ ಹೊತ್ತಿಗೆ ಯುವಕ ಪ್ರಜ್ನೆ ತಪ್ಪಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಕವಿಪ್ರಿಯಾ ಮತ್ತು ಆತನ ಲವರ್ ಹರ್ಷವರ್ಧನ ಯುವಕನ ಮೇಲಿದ್ದ ಬ್ರಾಸ್ ಲೈಟ್, ಚೈನ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
ಸುಮಾರು 6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12 ಸಾವಿರ ರೂ. ಮೌಲ್ಯದ ಹೆಡ್‌ಸೆಟ್ ಮತ್ತು 10 ಸಾವಿರ ರೂ. ನಗದು ದೋಚಿದ್ದ ಜೋಡಿ ಬ್ರಾಸ್ ಲೈಟ್ನ್ನು ನಗರದಲ್ಲಿ ಆಡ ಇಟ್ಟು ತಮಿಳುನಾಡು ಸೇರಿದ್ದರು. ಇದೀಗ ಇಂದಿರಾನಗರ ಪೊಲೀಸರು ಕೇಸ್ ದಾಖಲಿಸಿ ತಮಿಳುನಾಡಿನಲ್ಲಿ ಈ ಜೋಡಿಯನ್ನ ಬಂಧಿಸಿ ಕರೆ ತಂದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಹೈಫೈ ಲೈಫ್ ಲೀಡ್ ಮಾಡಲು ಇದ್ದಬದ್ಧ ಹಣ ಖರ್ಚು ಮಾಡಿದ್ದ ಈ ಜೋಡಿ, ಪುನಃ ಹಣ ಹೊಂದಿಸಲು ಡೇಟಿಂಗ್ ಆ್ಯಪ್ ಮೊರೆ ಹೋಗಿ ಅಮಾಯಕ ಯುವಕರಿಗೆ ಗಾಳ ಹಾಕುತ್ತಿದ್ದರಂತೆ.
ಸದ್ಯ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನ ಬಂಧಿಸಿದ್ದಾರೆ. ಚೆನ್ನೈನಲ್ಲಿ ಒಂದು ಆಭರಣ ಆಡವಿಟ್ಟಿದ್ದು, ಜಪ್ತಿ ಮಾಡಲು ತೆರಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕವಿಪ್ರಿಯಾ ತನ್ನ ಬಾಯ್‌ಫ್ರೆಂಡ್ ಹರ್ಷವರ್ಧನನೊಂದಿಗೆ ಸೇರಿ ಈ ಹನಿಟ್ರ್ಯಾಪ್ ಅನ್ನು ಯೋಜಿಸಿರುವುದು ಬೆಳಕಿಗೆ ಬಂದಿದೆ. ಕೈ ತುಂಬ ಸಂಬಳ ಬರ್ತಿದ್ರು, ಮೋಜು ಮಸ್ತಿ ದುರಾಸೆಯಿಂದ ಇಬ್ಬರು ಟೆಕ್ಕಿಗಳು ಈಗ ಜೈಲು ಸೇರುವಂತಾಗಿದೆ.
ಇದನ್ನೂ ಓದಿ : ಕೈನಾಯಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗ್ತಿದ್ದಾರೆ | ಅಶೋಕ್ ವಾಗ್ದಾಳಿ



















