ಬೆಂಗಳೂರು: ಇಂದು ರಾಜ್ಯ ಬಂದ್ ಗೆ ಕರೆ ನೀಡಲಾಗಿದ್ದರೂ ಬೆಳಗಿನ ಜಾವ ಎಂದಿನಂತೆ ಬಸ್ ಸಂಚಾರ ನಡೆಸುತ್ತಿವೆ.
ಜನರು ಕೂಡ ಬಂದ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಂಚರಿಸುತ್ತಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಗಳು ಕೂಡ ಎಂದಿನಂತೆ ಸಂಚರಿಸುತ್ತಿವೆ. ಆಟೋ, ಕ್ಯಾಬ್ ಓಡಾಟ ಕೂಡ ಎಂದಿನಂತೆ ಇದೆ.
ಬೆಳಗಿನ ವಾತವರಣ ನೋಡಿದರೆ ಬಂದ್ ಫುಲ್ ಪ್ಲಾಪ್ ಆಗಿದೆ. ಜನರಿಂದ ಬಂದ್ ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಜನರು ತಮ್ಮ ತಮ್ಮ ದುಡಿಮೆಯಲ್ಲಿ ತೊಡಗಿಕೊಂಡಿದ್ದಾರೆ. ದೂರದ ಊರುಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ದೂರದ ಊರುಗಳಿಂದ ಬಸ್ ಬರುತ್ತಿವೆ. 4ನೇ ಶನಿವಾರವಾದ ಕಾರಣ ಈಗಾಗಲೇ ಸರ್ಕಾರಿ ಹಾಗೂ ಕೆಲವು ಖಾಸಗಿ ಕಂಪನಿಗಳಿಗೆ ರಜೆ ಇದೆ. ಹೀಗಾಗಿ ಹಲವರು ವೀಕೆಂಡ್ ಲೈಫ್ ಅನುಭವಿಸುತ್ತಿದ್ದಾರೆ.
ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ ಸೇರಿದಂತೆ ನಗರದ ಬಹುತೇಕ ಕಡೆ ಎಂದಿನಂತೆ ಜನ- ಜೀವನ ಇದೆ. ಆದರೆ, ಗಲ್ಲಿ ಗಲ್ಲಿಗಳಲ್ಲೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಎಂದಿನಂತೆ ಹೋಟೆಲ್, ಬಾರ್, ರೆಸ್ಟೋರೆಂಟ್ ಓಪನ್ ಆಗಿವೆ.